ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಕಣದಲ್ಲಿ ಆಗರ್ಭ ಶ್ರೀಮಂತರೇ!

Last Updated 22 ಏಪ್ರಿಲ್ 2013, 9:28 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿಲಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಆಗರ್ಭ ಶ್ರೀಮಂತರೇ ಆಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇ ಗೌಡ ಅವರ ಸ್ಥಿರ ಮತ್ತು ಚರಾಸ್ತಿ ಮೌಲ್ಯ 17.23 ಕೋಟಿ ರೂಪಾಯಿ. 6.41 ಕೋಟಿ ಮೌಲ್ಯದ ಸ್ಥಿರಾಸ್ತಿ, ಪತ್ನಿ ಹೆಸರಿನಲ್ಲಿ 7.06 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಮಕ್ಕಳ ಹೆಸರಿನಲ್ಲಿ 3.72 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಮತ್ತು ಮೂಲತಃ ಕಾಫಿ ಬೆಳೆಗಾರರಾದ ರಾಜೇಗೌಡ ಇಡೀ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಆಸ್ತಿ-ಪಾಸ್ತಿ ಹೊಂದಿರುವ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್.ಜೀವರಾಜ್ ಮತ್ತು ಅವರ ಪತ್ನಿ ನಿವೇದಿತಾ ಹೆಸರಿನಲ್ಲಿ ಒಟ್ಟು 3.85 ಕೋಟಿ ಆಸ್ತಿ ಇದೆ. ನಗದು, ಬ್ಯಾಂಕ್ ಖಾತೆಯಲ್ಲಿರುವ ಮೊತ್ತ 44.58 ಲಕ್ಷ ರೂಪಾಯಿ. ಪತ್ನಿ ಬಳಿ 6.97 ಲಕ್ಷ ರೂಪಾಯಿ ನಗದು ಇದೆ. ಷೇರು ಮತ್ತಿತರ ಹೂಡಿಕೆಗಳಲ್ಲಿ ಸಚಿವರು, 15.36 ಲಕ್ಷ ರೂಪಾಯಿ ತೊಡ ಗಿ ಸಿದ್ದಾರೆ. ಪತ್ನಿ 10.30 ಲಕ್ಷ ತೊಡಗಿಸಿದ್ದಾರೆ.

19.30 ಲಕ್ಷ ರೂಪಾಯಿಯ ಮೌಲ್ಯದ ವಾಹನ, 4.20 ಲಕ್ಷ ಮೌಲ್ಯದ ಚಿನ್ನ, 1.21 ಲಕ್ಷದ ಬೆಳ್ಳಿ, ಪತ್ನಿ ಬಳಿ 15.40 ಲಕ್ಷದ ಚಿನ್ನಾಭರಣ ಇದೆ. 45.10 ಲಕ್ಷ ರೂಪಾಯಿ ಮೌಲ್ಯದ ಕೃಷಿ ಮತ್ತು ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲೂ 39.50 ಲಕ್ಷದ ಕೃಷಿ ಹಾಗೂ ಕೃಷಿಯೇತರ ಭೂಮಿ ಇದೆ. ಪ್ರಸಕ್ತ ಮಾರು ಕಟ್ಟೆಯಲ್ಲಿ 1.85 ಕೋಟಿ ಮೌಲ್ಯ ಇರುವ ಕಟ್ಟಡ, ಪತ್ನಿ ಹೆಸರಿನಲ್ಲಿ 61.50 ಲಕ್ಷ ಮೌಲ್ಯದ ಕಟ್ಟಡ ಇದೆ. ಜೀವರಾಜ್ ತಲೆ ಮೇಲೆ 93.35 ಲಕ್ಷ ಸಾಲ ಇದೆ. ಪತ್ನಿ ತಲೆ ಮೇಲೂ 19.01 ಲಕ್ಷ ಸಾಲವಿದೆ. ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರಿಗೆ ಜೀವ ರಾಜ್ 8 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿರುವ ಹೋಟೆಲ್ ಉದ್ಯಮಿ ತಲಕಾನೆ ಟಿ.ಸಿ.ರಾಜೇಂದ್ರ ಕೂಡ ಕೋಟ್ಯಧೀಶರೇ. 1.26 ಕೋಟಿ ಮೌಲ್ಯದ ಚರಾಸ್ತಿ ಹಾಗೂ 3.24 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂ ದಿದ್ದಾರೆ. ಪತ್ನಿ ಬಳಿ 12.46 ಲಕ್ಷದ ಚರಾಸ್ತಿ ಮತ್ತು 10 ಲಕ್ಷ ರೂಪಾಯಿಯ ಸ್ಥಿರಾಸ್ತಿ ಇದೆ. 81.67 ಲಕ್ಷ ನಗದು ಮತ್ತು ಪತ್ನಿ ಬಳಿ 14 ಸಾವಿರ ನಗದು ಹೊಂದಿದ್ದಾರೆ.

ಶೃಂಗೇರಿಯಲ್ಲಿ ಹೋಟೆಲ್, ನಿವೇಶನ, ಕೊಪ್ಪದ ಅದ್ದಡದಲ್ಲಿ   ಗೆಸ್ಟ್‌ಹೌಸ್, ಮೈಸೂರಿನಲ್ಲಿ ಎರಡು ನಿವೇಶನ ಸೇರಿದಂತೆ 2.38 ಕೋಟಿ ರೂಪಾ ಯಿಗಳ ಕಟ್ಟಡ, ನಿವೇಶನ ಹೊಂದಿದ್ದಾರೆ. ಅದ್ದಡದಲ್ಲಿ 12.15 ಲಕ್ಷದ 9 ಎಕರೆ ಕೃಷಿ ಜಮೀನು, ಶೃಂಗೇರಿಯಲ್ಲಿ 2 ಲಕ್ಷದ ಜಮೀನು, ನಂಜನಗೂಡಿಯಲ್ಲಿ ಜಮೀನು ಹೊಂದಿದ್ದಾರೆ. 11.02 ಲಕ್ಷದ 551 ಗ್ರಾಂ ಚಿನ್ನ, ಫೋರ್ಡ್, ಹೋಂಡಾ ಸಿಆರ್, ಮಾರುತಿ ಕಾರು ಹಾಗೂ ಪತ್ನಿ ಬಳಿ ಒಂದು ಮಾರುತಿ ಕಾರು ಇದೆ.

ರಾಜೇಂದ್ರ ವಿವಿಧೆಡೆ ಹೂಡಿಕೆ ಮಾಡಿರುವುದು, ವಿವಿಧ ಬ್ಯಾಂಕ್‌ಗಳಲ್ಲಿಟ್ಟಿರುವ ನಗದು, ಜೀವವಿಮೆ, ವಾಹನ, ಚಿನ್ನಾಭರಣದ ಒಟ್ಟು ಮೊತ್ತ 1.26 ಕೋಟಿ. ಪತ್ನಿ 12.46 ಲಕ್ಷ  ಹೂಡಿಕೆ ಮಾ ಡಿದ್ದಾರೆ. ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ರಾಜೇಂದ್ರ 1.25 ಕೋಟಿ ರೂಪಾಯಿ ಸಾಲ ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT