ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1.1 ರಷ್ಟು ‘ನೋಟಾ’ ಮತ

Last Updated 16 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: 16 ನೇ ಲೋಕಸಭೆಗೆ ಒಂಬತ್ತು ಹಂತಗಳಲ್ಲಿ ನಡೆದ ಚುನಾವಣೆ­ಯಲ್ಲಿ ಶೇ 1.1 ರಷ್ಟು ‘ನೋಟಾ’ ಮತಗಳು ಚಲಾವಣೆಯಾಗಿವೆ.

28 ರಾಜ್ಯಗಳಲ್ಲಿ ಒಟ್ಟು 58,91,702 ಮತದಾರರು ನೋಟಾ (ಮೇಲಿನ­ವರಲ್ಲಿ ಯಾರಿಗೂ ಮತವಿಲ್ಲ) ಆಯ್ಕೆ ಮಾಡಿಕೊಂಡಿದ್ದಾರೆ.
ಅಚ್ಚರಿಯೆಂದರೆ ಕೆಲ ರಾಜಕೀಯ ಪಕ್ಷಗಳು ‘ನೋಟಾ’ ಕ್ಕಿಂತ ಕಡಿಮೆ ಶೇಕಡಾವಾರು  ಮತಗಳನ್ನು ಪಡೆದಿವೆ. 

ಸಿಪಿಐ ಶೇ 0.8, ಜೆಡಿಎಸ್‌ 0.7, ಶಿರೋಮಣಿ ಅಕಾಲಿದಳ ಶೇ 0.7, ಎಲ್‌ಜೆಪಿ 0.4, ಡಿಎಂಕೆ 0.4 ಹಾಗೂ ಜೆಎಂಎಂ ಶೇ 0.3 ರಷ್ಟು ಮತಗಳನ್ನು ಪಡೆದಿವೆ. ಇದೇ ಮೊದಲ ಬಾರಿ ಮತಯಂತ್ರದಲ್ಲಿಯೇ ನೋಟಾ ಆಯ್ಕೆಯನ್ನು ಮತದಾರರಿಗೆ ನೀಡಲಾಗಿತ್ತು.
ಪುದುಚೇರಿಯಲ್ಲಿ ಅತೀ ಹೆಚ್ಚು ನೋಟಾ ಬಳಕೆಯಾಗಿದೆ. ಶೇ 3 ರಷ್ಟು ಮತದಾರರು ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT