ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾಕ್ಕೆ ಸುರಳಿ ಪೂಚಿ ರೋಗ

Last Updated 16 ಸೆಪ್ಟೆಂಬರ್ 2011, 9:50 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ 9350 ಹೆಕ್ಟೇರ್ ಶೇಂಗಾ ಸುರಳಿಪೂಚಿ ಕೀಟ ರೋಗಕ್ಕೆ ತುತ್ತಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜು ತಿಳಿಸಿದ್ದಾರೆ.

ಸುರಳಿಪೂಚಿ ಕೀಟ ಬಾಧೆಯು ತಾಲ್ಲೂಕಿನ ಕಸಬಾ, ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಬುಕ್ಕಾಪಟ್ಟಣ ಹಾಗೂ ಕಳ್ಳಂಬೆಳ್ಳ ಹೋಬಳಿಗಳಲ್ಲಿ ಭಾಗಶಃ ಕಂಡುಬಂದಿದೆ ಎಂದು  ತಿಳಿಸಿದ್ದಾರೆ.

ಶೇಂಗಾ ಬೆಳೆಗೆ ಸುರಳಿಪೂಚಿ ಕೀಟಬಾಧೆ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಹಾಗೂ ಕೀಟತಜ್ಞರಾದ ಡಾ.ಜಗದೀಶ್, ಡಾ.ಪ್ರಭುಗಾಣಿಗರ್, ಡಾ.ಚನ್ನಿಕೃಷ್ಣ ಮತ್ತಿತರರನ್ನು ಆಹ್ವಾನಿಸಿ ಅವರನ್ನು ತಾಲ್ಲೂಕಿನ ಹುಚ್ಚಗೀರನಹಳ್ಳಿ, ಮುದ್ದರಂಗನಹಳ್ಳಿ, ಬಂದಕುಂಟೆ, ಹನುಮನಹಳ್ಳಿ ಹಾಗೂ ರಂಗಾಪುರದ ಗ್ರಾಮಗಳ ಶೇಂಗಾ ಬೆಳೆ ತಾಕುಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದು, ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾಗಿ ಹೇಳಿದ್ದಾರೆ.

ತಾಲ್ಲೂಕಿನಲ್ಲಿ ಈ ವರ್ಷ 45530 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೇವಲ 23750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT