ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಅಭಿವೃದ್ಧಿಗೆ ಯೋಜನೆ

Last Updated 5 ಫೆಬ್ರುವರಿ 2011, 7:35 IST
ಅಕ್ಷರ ಗಾತ್ರ

ವಿಜಾಪುರ: ‘ದೇಶದಲ್ಲಿ ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ 374 ವಲಯಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವೆ ಡಾ.ಡಿ. ಪುರಂದೇಶ್ವರಿ ಹೇಳಿದರು.ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ 374 ವಲಯಗಳಲ್ಲಿ ಕರ್ನಾಟಕದ ಕೆಲ ಪ್ರದೇಶಗಳೂ ಸೇರಿವೆ. ವಿಜಾಪುರವೂ ಇರಬಹುದಾಗಿದೆ ಎಂದರು.

ಈ ಯೋಜನೆಯಂತೆ ಹಿಂದುಳಿದ ಪ್ರದೇಶಗಳ ಶೈಕ್ಷಣಿಕ ಅಭಿವೃದ್ಧಿಗೆ ಮೂರನೇ ಒಂದು ಪಾಲಿನ ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಹೇಳಿದರು.11ನೇ ಹಣಕಾಸು ಯೋಜನೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೇಂದ್ರ ಸರ್ಕಾರ ದೇಶದ ಒಟ್ಟು ಆದಾಯದ ಶೇ.6ರಷ್ಟು ಹಣವನ್ನು ಶಿಕ್ಷಣ ರಂಗಕ್ಕೆ ಖರ್ಚು ಮಾಡುತ್ತಿದೆ.
ಆದರೆ, ರಾಜ್ಯ ಸರ್ಕಾರಗಳು ಶಿಕ್ಷಣ ರಂಗಕ್ಕೆ ಕಡಿಮೆ ಹಣವನ್ನು ವಿನಿಯೋಗಿಸುತ್ತಿವೆ. ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಗಳೂ ಶಿಕ್ಷಣ ರಂಗಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಶಾಲೆಗಳಲ್ಲಿ ವರ್ಷದುದ್ದಕ್ಕೂ ನಿರಂತರವಾಗಿ ಮಕ್ಕಳ ಮೌಲ್ಯಮಾಪನ ಮಾಡಿ ವರ್ಷದ ಕೊನೆಯಲ್ಲಿ ಗ್ರೇಡ್ ನೀಡುವ ಚಿಂತನೆ ನಡೆದಿದೆ. ಇದರಿಂದಾಗಿ ವರ್ಷದ ಕೊನೆಯಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಅಳೆಯುವುದು ತಪ್ಪುತ್ತದೆ ಎಂದರು. ದೇಶದಲ್ಲಿ 12 ಲಕ್ಷ ಶಾಲೆಗಳಿದ್ದು, ಅವುಗಳಲ್ಲಿ ಕೇವಲ 11 ಸಾವಿರದಷ್ಟು ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಗಳಿವೆ. ದೇಶದಲ್ಲಿ ಈಗಾಗಲೆ 6 ಸಾವಿರ ಆದರ್ಶ ವಿದ್ಯಾಲಯ ಆರಂಭಿಸಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದು ಪುರಂದೇಶ್ವರಿ ಹೇಳಿದರು. ಕುಲಪತಿ ಡಾ.ಗೀತಾ ಬಾಲಿ ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT