ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಕ್ರಾಂತಿ ವೀರಶೈವ ಧರ್ಮದ ಕೊಡುಗೆ

Last Updated 4 ಫೆಬ್ರುವರಿ 2012, 4:35 IST
ಅಕ್ಷರ ಗಾತ್ರ

ಕೂಡ್ಲಿಗಿ: ಸಾಮೂಹಿಕತೆ ಹಾಗೂ ಶೈಕ್ಷಣಿಕ ಕ್ರಾಂತಿ ವೀರಶೈವ ಧರ್ಮದ ಅಮೋಘ ಕೊಡುಗೆಯಾಗಿದೆ ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಪಟ್ಟಣದ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ, ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ 89ನೇ ಜನ್ಮ ದಿನೋತ್ಸವ, ಶಿವದೀಕ್ಷಾ, ಸಾಮೂಹಿಕ ವಿವಾಹ ಮತ್ತು ಹಿರೇಮಠದ ಶ್ರಿ ಗುರು ಪಟ್ಟಾಧಿಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೀರಶೈವ ಧರ್ಮ 12ನೇ ಶತಮಾನಕ್ಕಿಂತಲೂ ಮುಂಚಿನಿಂದಲೇ ಜನತೆಗೆ ಅಪಾರವಾದ ಕೊಡುಗೆಯನ್ನು ನೀಡುತ್ತಲೇ ಬಂದಿದೆ. ಮಹಿಳೆಯರನ್ನು ಗೌರವಿಸುವ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಹಿರಿಮೆ ವೀರಶೈವ ಧರ್ಮದ್ದು ಎಂದು ಅವರು ಹೇಳಿದರು. ಸಂವೇದನಾಶೀಲತೆಯನ್ನು ಹೊಂದಿರುವ ಧರ್ಮವೆಂದರೆ ವೀರಶೈವ ಧರ್ಮ ಮಾತ್ರ ಎಂದು ಅವರು ವಿವರಿಸಿದರು.

ಅಸ್ಪೃಶ್ಯತೆ ತೊಲಗಿಸುವುದು, ಕಾಯಕ, ದಾಸೋಹದ ಮಹತ್ವ ತಿಳಿಸುವುದು, ಸಾಮೂಹಿಕ ಚಳವಳಿ, ಅನಕ್ಷರತೆಯ ನಿವಾರಣೆ 12ನೇ ಶತಮಾನದ ವಿಶಿಷ್ಟ ಕಾರ್ಯಗಳಾಗಿವೆ ಎಂದರು. ಅತಿಹಿಂದುಳಿದ ಪ್ರದೇಶದಲ್ಲಿ 1968ರಿಂದಲೂ ಶಿಕ್ಷಣಕ್ಕಾಗಿ ಶ್ರಮಿಸಿ, ವಿದ್ಯಾಸಂಸ್ಥೆಗಳನ್ನು ಬೆಳೆಸಿದ ಹಿರೇಮಠದ ಶ್ರಿಗಳ ಕಾರ್ಯ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಯು.ರಾಮಮೂರ್ತಿ, ಕೇವಲ ಕೆಲವೇ ವಿದ್ಯಾರ್ಥಿಗಳಿಗೋಸ್ಕರ ಬಾಲಕಿಯರಿಗಾಗಿಯೇ ಪ್ರೌಢಶಾಲೆಯನ್ನು ಆರಂಭಿಸಿ, ಉತ್ತಮ ಶಾಲೆ, ಕಾಲೇಜನ್ನಾಗಿ ಬೆಳೆಸಿದ ಕೀರ್ತಿ ಹಿರೇಮಠದ ಶ್ರಿಗಳದ್ದು ಎಂದರು.
 
60ರ ದಶಕದಲ್ಲಿ ಎಲ್ಲ ರೀತಿಯಿಂದಲೂ ಅತ್ಯಂತ ಹಿಂದುಳಿದಿದ್ದ ಪ್ರದೇಶದಲ್ಲಿ ವಿದ್ಯಾಸಂಸ್ಥೆಯೊಂದನ್ನು ಆರಂಭಿಸುವುದು ಕಷ್ಟಕರವಾಗಿತ್ತು. ಆದರೂ ಶಾಲೆ, ಕಾಲೇಜುಗಳನ್ನು ಆರಂಭಿಸಿ, ವಸತಿ ನಿಲಯವನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸಿ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಶ್ರಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಅವರು ತಿಳಿಸಿದರು.

ಉಪನ್ಯಾಸಕಿ ಡಾ.ಟಿ.ಕೊತ್ಲಮ್ಮ, ಪುರುಷರು ಮಹಿಳೆಯ ರೆಂಬ ಭೇದವಿಲ್ಲದೇ ಎ್ಲ್ಲಲರಿಗೂ ಸಮಾನವಾದ ಅವಕಾಶ ನೀಡುವ 12ನೇ ಶತಮಾನದ ಪರಿಕಲ್ಪನೆಯನ್ನು ಹಲವಾರು ಶೈಕ್ಷಣಿಕ ಹಿನ್ನೆಲೆಯಲ್ಲಿ ಮಠಮಾನ್ಯಗಳು ಉಳಿಸಿಕೊಂಡು ಬಂದವು, ಪಟ್ಟಣದ ಹಿರೇಮಠದ ಶ್ರಿಗಳೂ ಸಹ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದರು ಎಂದರು.

ವಕೀಲ ಎಂ.ಎಂ.ಜೆ.ಸ್ವರೂಪಾನಂದ ಮಾತನಾಡಿದರು. ಸಮಾರಂಭದ ಸಾನ್ನಿಧ್ಯವನ್ನು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸ್ದಿದರು.ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹರಪನಹಳ್ಳಿ ಚಂದ್ರಮೌಳೇಶ್ವರ ಸ್ವಾಮಿಗಳು, ಕೊಣ್ಣೂರಿನ ಪ್ರಭುದೇವ ಸ್ವಾಮೀಜಿ, ಬೆಣ್ಣೆಹಳ್ಳಿ ಪಂಚಾಕ್ಷರಿ ಸ್ವಾಮಿಗಳು, ಪುರಗಿರಿಯ ಶಿವಸಂಗಮೇಶ ದೇವರು, ಹಿರೇಮಠದ ನೂತನ ಗುರುಗಳಾದ ಪ್ರಶಾಂತ ಸಾಗರ ಸ್ವಾಮಿಗಳು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಹಿರಿಯ ನಾಗರಿಕರಾದ ಅಂಗಡಿ ಸಿದ್ದಣ್ಣ, ಗುಳಿಗಿ ವೀರೇಂದ್ರಕುಮಾರ್, ಕೆ.ಎಂ.ತಿಪ್ಪೇಸ್ವಾಮಿ, ಬ್ಯಾಳಿ ವಿಜಯಕುಮಾರಗೌಡ, ಬ್ಯಾಳಿ ಶಿವಪ್ರಸಾದಗೌಡ, ಬಂಗಾರಿ ಹನುಮಂತ, ಟಿ.ಮರಿಯಪ್ಪ, ಪಿ.ಪದ್ಮಾ, ವಕೀಲರಾದ ಶಿವನಾಗಪ್ಪ, ಓಬಳೇಶಪ್ಪ, ಡಾ.ಟಿ.ಎ.ಎಂ.ಶಾಂತಯ್ಯ, ಹಡಗಲಿ ವೀರಭದ್ರಪ್ಪ, ಟಿ.ಸೋಮಪ್ಪ, ಬಣಕಾರ ಸಿದ್ರಾಮಪ್ಪ, ಕಾಟೇರ ಹಾಲೇಶ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಷಫಿವುಲ್ಲ, ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಕುಮಾರಸ್ವಾಮಿ, ಪಟ್ಟಣಶೆಟ್ರು ವಿಜಯಕುಮಾರ, ಅಂಗಡಿ ವೀರೇಶ, ಭರಮಣ್ಣ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸ ಲಾಯಿತು.ಸಂಗೀತ ಶಿಕ್ಷಕ ಆರ್.ಎಸ್.ಮರಿದೇವರಮಠ ಪ್ರಾರ್ಥಿಸಿದರು. ಪ್ರಭಾರಿ ಪ್ರಾಚಾರ್ಯರಾದ ಸಿದ್ಧರಾಮ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಎಸ್.ವೀರೇಶ ಸ್ವಾಗತಿಸಿದರು. ಎಸ್.ಎಂ.ಮರುಳಸಿದ್ದಯ್ಯ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT