ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪೈಪೋಟಿ ಎದುರಿಸಲು ಸನ್ನದ್ಧರಾಗಿ

`ಎಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಪರೀಕ್ಷೆಗೆ ಸಿದ್ಧರಾಗಿ' ಕಾರ್ಯಕ್ರಮದಲ್ಲಿ ಚವಾಣ್ ಕರೆ
Last Updated 23 ಫೆಬ್ರುವರಿ 2013, 10:27 IST
ಅಕ್ಷರ ಗಾತ್ರ

ಶಿವಮೊಗ್ಗ:  ಪ್ರಸ್ತುತ ಶೈಕ್ಷಣಿಕ ವೈವಸ್ಥೆ ತೀವ್ರ ಪೈಪೋಟಿಯಿಂದ ಕೊಡಿದ್ದು, ವಿದ್ಯಾರ್ಥಿಗಳು ಈ ಪೈಪೋಟಿ ಎದುರಿಸಲು ಸಿದ್ಧರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್.ಎಲ್. ಚವಾಣ್ ಕರೆ ನೀಡಿದರು.

ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ `ಎಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಪರೀಕ್ಷೆಗೆ ಸಿದ್ಧರಾಗಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯಪುಸ್ತಕದ ಪಾಠಗಳನ್ನು ಬಾಯಿಪಾಠದೇ ವಿಷಯವನ್ನು ಆರ್ಥೈಸಿಕೊಳ್ಳಲು ಪ್ರಯತ್ನಿಸಬೇಕು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಪೈಪೋಟಿಯಿಂದ ಕೂಡಿದ್ದು, ಪರೀಕ್ಷೆಯಲ್ಲಿ ಗಳಿಸುವ ಒಂದೊಂದು ಅಂಕಗಳು ವಿದ್ಯಾರ್ಥಿಯ ಭವಿಷ್ಯ ರೂಪಿಸಲು ಮಹತ್ವಪೂರ್ಣವಾದುದು ಎಂದರು.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಆತಂಕ ಇಟ್ಟುಕೊಂಡಿರುತ್ತಾರೆ. ಆದರೆ, ನಿರಂತರವಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ, ಓದಿದನ್ನು ಸರಿಯಾಗಿ ಗ್ರಹಿಸಿ ಆರ್ಥೈಸಿಕೊಂಡರೆ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಧಿಕಾರಿ ಟಿ.ಎನ್. ಕಮಲಾಕರ್, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ದಿವಾಕರ್, ಶ್ರೀನಿಧಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಡಿ.ಆರ್. ಶ್ರೀಕಂಠಯ್ಯ, ನಾಗರಾಜ್, ಅಮರೇಗೌಡ, ಡಾ.ಬಾಲಕಷ್ಣ, ವೇದಾವತಿ ಉಪಸ್ಥಿತರಿದ್ದರು. ಎಸ್.ಎಸ್. ಪಾಟೀಲ್ ಸ್ವಾಗತಿಸಿದರು. ಲೋಕೇಶಪ್ಪ ಕಾರ್ಯಕ್ರಮ ನಿರೂಪಿಸಿದರು.

ಭದ್ರಾವತಿ: ಪದಾಧಿಕಾರಿಗಳ ಆಯ್ಕೆ

ಭದ್ರಾವತಿ:
ಇಲ್ಲಿನ ತೆಲುಗು ಕ್ರಿಶ್ಚಿಯನ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಗಿದೆ.

ಟಿ. ದೇವದಾಸ್ (ಅಧ್ಯಕ್ಷ), ಅಂತೋಣಿ (ಉಪಾಧ್ಯಕ್ಷ), ಜೆ. ಭಾಸ್ಕರ್ (ಪ್ರಧಾನ ಕಾರ್ಯದರ್ಶಿ), ಎಂ. ದಾನಂ (ಉಪ ಕಾರ್ಯದರ್ಶಿ), ದೈವಾನಂದ್ ಕ್ರಿಸ್ಟೋಫರ್ (ಖಜಾಂಚಿ), ಸ್ಯಾಮುಯೆಲ್, ಟಿ. ಜಾನ್ಸನ್ (ಸಂಚಾಲಕರು), ಸನ್ಯಾಸಿರಾವ್, ಟಿ.ಎಸ್. ಪ್ರಭುದಾಸ್ (ಗೌರವ ಸಲಹೆಗಾರರು). ರಾಜೇಂದ್ರ ಪ್ರಸಾದ್, ಜಾನ್ಸನ್, ಪ್ರಸನ್ನ, ಯೋನಾಕುಮಾರ್, ಪ್ರಸನ್ನಕುಮಾರ್, ಅಂತೋಣಿ, ಪ್ರಕಾಶ್, ಜಕರಯ್ಯ, ಗಾಬ್ರಿಯಲ್, ಪ್ರಭುದಾಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT