ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಯಬ್ ಬೆಂಬಲಕ್ಕೆ ಅಫ್ರಿದಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): `ಸಚಿನ್ ತೆಂಡೂಲ್ಕರ್ ಅವರು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯಬ್ ಅಖ್ತರ್ ವೇಗಕ್ಕೆ ಹೆದರುತ್ತಿದ್ದರು ಎಂಬುದಕ್ಕೆ ನಾನೇ ಸಾಕ್ಷಿ~

-ಈ ಮಾತು ಹೇಳಿದ್ದು ಪಾಕಿಸ್ತಾನ ಕ್ರಿಕೆಟ್‌ನ ಮತ್ತೊಬ್ಬ ಆಟಗಾರ ಹಾಗೂ ಶೋಯಬ್ ಸಹಪಾಠಿ ಶಾಹೀದ್ ಅಫ್ರಿದಿ.

`ಹೌದು, ಅಖ್ತರ್ ವೇಗಕ್ಕೆ ಸಚಿನ್ ಹೆದರುತ್ತಿದ್ದರು. ನಾನೇ ಅದನ್ನು ನೋಡಿದ್ದೇನೆ. ಸ್ಕ್ವೇರ್ ಲೆಗ್‌ನಲ್ಲಿ ನಾನು ಫೀಲ್ಡ್ ಮಾಡುತ್ತಿದ್ದೆ. ಶೋಯಬ್ ಬೌಲ್ ಮಾಡಲು ಬಂದ ತಕ್ಷಣ ತೆಂಡೂಲ್ಕರ್ ಕಾಲುಗಳು ಅದುರುತ್ತಿದ್ದವು~ ಎಂದು ಮಾಜಿ ನಾಯಕ ಅಫ್ರಿದಿ ನುಡಿದಿದ್ದಾರೆ.

ಈ ಮೂಲಕ ಅಖ್ತರ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಾವ ಪಂದ್ಯದಲ್ಲಿ ಈ ರೀತಿ ಆಗಿತ್ತು ಎಂಬುದನ್ನು ಅಫ್ರಿದಿ ವಿವರಿಸಿಲ್ಲ. ಉಪಖಂಡದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕ್‌ನ ಯುವ ಸ್ಪಿನ್ನರ್ ಸಯೀದ್ ಅಜ್ಮಲ್ ಎಸೆತಗಳನ್ನು ಎದುರಿಸಲು ಕೂಡ ಪರದಾಡಿದ್ದರು ಎಂಬುದನ್ನು ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT