ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ದಿಕ್ಕುತಪ್ಪಿಸುವ ಪಟ್ಟಭದ್ರ ಹಿತಾಸಕ್ತಿ

Last Updated 10 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶೋಷಿತರು ರಾಜಕೀಯ ಅಧಿಕಾರ ಹಿಡಿದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾ ಕೃಷ್ಣ ಹೇಳಿದರು.ನಗರದ ಬಿ.ಎಸ್.ಪಿ.ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನ್ಷಿರಾಮ್ ಪರಿನಿಬ್ಬಾಣ ದಿನಾ ಚರಣೆಯಲ್ಲಿ ಕಾನ್ಷಿರಾಮ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದವರು ಒಬ್ಬೊರಾಗಿ ಜೈಲು ಸೇರುತ್ತಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಗಳು ಬಂಧನದ ಭೀತಿ ಎದುರಿಸುವಂತಾಗಿದೆ ಎಂದು ಹೇಳಿದರು. ದೇಶವನ್ನು ಆಳಿದ ಯಾವುದೇ ಪಕ್ಷಗಳು ಸಂವಿಧಾನ ವನ್ನು ಪರಿಪೂರ್ಣವಾಗಿ ಜಾರಿಗೊಳಿಸಲು ಮುಂದಾಗಿಲ್ಲ.

ಶೇ.85ರಷ್ಟಿರುವ ಬಹುಜನರು ಅಧಿಕಾರ ಹಿಡಿದಾಗ ಮಾತ್ರ ದೇಶದ ಸಂಪತ್ತು ಸರಿಯಾದ ರೀತಿಯಲ್ಲಿ ಹಂಚಿಕೆಯಾಗಲು ಸಾಧ್ಯವಾಗು ತ್ತದೆ ಎಂದು ತಿಳಿಸಿದರು.ಶೋಷಿತ ವರ್ಗದವರನ್ನು ದಿಕ್ಕುತಪ್ಪಿಸಲು ಪಟ್ಟಭದ್ರಹಿತಾಸಕ್ತಿಗಳು ಷಡ್ಯಂತ್ರ ರೂಪಿಸುತ್ತಿವೆ.

ಶೋಷಿತರು ಕಾನ್ಷಿರಾಮ್ ಅವರ ಹೋರಾಟವನ್ನು ಸ್ಫೂರ್ತಿಯಾಗಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕೆಂದು ಮನವಿ ಮಾಡಿದರು.ಬಹುಜನಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಗೋಪಾಲ್ ಮಾತನಾಡಿ, ತುಳಿತಕ್ಕೆ ಒಳಗಾದವರಿಗೆ ಅಧಿಕಾರಿ ನೀಡಲು ಹೋರಾಟ ಮಾಡಿದವರು. ಸ್ವಾಭಿಮಾನದ ಬದುಕು ಕಟ್ಟಿಕೊಡಲು ಶ್ರಮಿಸಿದವರು ಕಾನ್ಷಿರಾಮ್ ಎಂದು ಬಣ್ಣಿಸಿದರು.

ಬಿ.ಎಸ್.ಪಿ. ತಾಲ್ಲೂಕು ಅಧ್ಯಕ್ಷ ತಂಬನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಜಗದೀಶ್, ಮುಖಂಡರಾದ ಸುರೇಶ್, ಕೆ.ಟಿ.ಶ್ರೀನಿವಾಸ, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT