ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಸೇವೆಯೇ ಒಕ್ಕೂಟದ ಗುರಿ

Last Updated 17 ಫೆಬ್ರುವರಿ 2012, 5:25 IST
ಅಕ್ಷರ ಗಾತ್ರ

ಕೋಲಾರ: ಅಖಿಲ ಭಾರತ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರ ನೌಕರರ ಒಕ್ಕೂಟ-ಬಾಂಸೆಫ್ 26 ರಾಜ್ಯಗಳಲ್ಲಿ ಶಾಖೆ ಹೊಂದಿದೆ. ಶೋಷಣೆಗೆ ಒಳಗಾದ ಜನರಿಗೆ ಸೇವೆ ಸಲ್ಲಿಸುವುದೇ ಸಂಘಟನೆ ಪ್ರಮುಖ ಉದ್ದೇಶ ಎಂದು ಬಾಂಸೆಫ್‌ನ ರಾಜ್ಯ ಘಟಕದ ಅಧ್ಯಕ್ಷ ದೇವಕುಮಾರ್ ಹೇಳಿದರು.

ನಗರದ ನಚಿಕೇತ ನಿಲಯದ ಸಭಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾವಂತ ಉದ್ಯೋಗಿಗಳಿಗೆ ಸಾಮಾಜಿಕ ಶಿಕ್ಷಣ ನೀಡುವುದು, ಪ್ರಾಮಾಣಿಕ ಮತ್ತು ಉತ್ತಮ ನಾಯಕರನ್ನು ರೂಪಿಸುವುದು, ಶೋಷಿತ ವರ್ಗಗಳಿಗೆ ಸಂವಿಧಾನಾತ್ಮಕ  ಹಕ್ಕು ಗುರುತಿಸಿಕೊಡುವುದೆ ಸಂಘಟನೆ ಮೂಲ ಉದ್ದೇಶ ಎಂದರು.

ಸಮಿತಿ ಉಸ್ತುವಾರಿಗಳಾದ ಎಂಜಿನಿಯರ್ ಫೂರ್ಪಡೆ, ವಕೀಲ ಪ್ರಕಾಶ್ ಮಾತನಾಡಿದರು.
ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಟೇಕಲ್ ಮುನಿವೆಂಕಟಪ್ಪ, ಉಪಾಧ್ಯಕ್ಷರಾಗಿ ಬಂಗಾರಪೇಟೆಯ ಶ್ರೀರಾಮ ಗಾಂಧಿ, ಮುಳಬಾಗಲಿನ ಎ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆಜಿಎಫ್‌ನ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿಯಾಗಿ ಕೋಲಾರದ ವೈ.ನಾರಾಯಣಸ್ವಾಮಿ, ಖಜಾಂಚಿಯಾಗಿ ನರಸಾಪುರ ಜಗನ್ನಾಥ್ ಹಾಗೂ ಸಮಿತಿ ಸದಸ್ಯರಾಗಿ ಎಸ್.ಆರ್.ನಾರಾಯಣ, ತೊಂಡಾಲ ನಾರಾಯಣಸ್ವಾಮಿ, ಮುನಿವೆಂಕಟಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಬಾಂಸೆಫ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ ಸ್ವಾಗತಿಸಿದರು. ಶ್ರೀರಾಮ್ ಗಾಂಧಿ ವಂದಿಸಿದರು. ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಾಲೂರು ಪಾಪಣ್ಣ, ನಿವೃತ್ತ ಸಹಾಯಕ ಅಧಿಕಾರಿ ಬಾಂಸೆಫ್ ನಾರಾಯಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT