ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಬ್ಸ್- ನೆದರ್‌ಲೆಂಡ್ ಬಿ.ವಿ ಸಂಸ್ಥೆ ಒಪ್ಪಂದ: ಗುಲಾಬಿ ತಳಿಗಳ ಪ್ರಯೋಗ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ನೆಲಮಂಗಲ: ಗುಲಾಬಿ ಪುಷ್ಪೋದ್ಯಮದಲ್ಲಿ ಉತ್ತಮ ಫಸಲು ಪಡೆಯುತ್ತಿರುವ ಮತ್ತು ವಿವಿಧ ಗುಲಾಬಿ ತಳಿಗಳ ಪ್ರಯೋಗದಲ್ಲಿ ನಿರತವಾಗಿರುವ ಸ್ಥಳೀಯ ಶ್ರಬ್ಸ್ ಎನ್ ರೋಸಸ್ ಸಂಸ್ಥೆಯೊಂದಿಗೆ ನೆದರ್‌ಲೆಂಡ್‌ನ ಮಯಿರ್‌ಹೀಮ್ ರೋಸಸ್ ಅಂಡ್ ಟ್ರೇಡಿಂಗ್ ಬಿ.ವಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಸಮೀಪದ ಕಣೇಗೌಡನಹಳ್ಳಿಯ ಪುಷ್ಪೋದ್ಯಮಿ ಭಾಸ್ಕರ್ ರೆಡ್ಡಿ ಅವರ ಈ ಸಸ್ಯ ಕ್ಷೇತ್ರಕ್ಕೆ ನೆದರ್‌ಲೆಂಡ್‌ನ ಭಾರತೀಯ ರಾಯಭಾರಿ ಬಾಬ್ ಹೀನ್ಸ್ ಮತ್ತು ಅಧಿಕಾರಿಗಳು ಭೇಟಿ ನೀಡಿ, ಪುಷ್ಪ ಕೃಷಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

`ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಪುಷ್ಪೋದ್ಯಮಿಗಳು ಮತ್ತು ಸಸ್ಯೋದ್ಯಮಿಗಳು ಇದ್ದು, ಇಲ್ಲಿನ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಲು ಎನ್ ರೋಸಸ್ ಮತ್ತು ಇಂಡೋ ಡಚ್ ನೆಟ್‌ವರ್ಕಿಂಗ್ ಮಿಷನ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ~ ಎಂದು ಬಾಬ್ ಹೀನ್ಸ್ ತಿಳಿಸಿದರು.

`ಸರ್ಕಾರ ಸೂಕ್ತ ಕಾಯ್ದೆ ಜಾರಿಗೆ ತಂದು ಗುಲಾಬಿ ತಳಿಗಳ ನಕಲನ್ನು ತಡೆಗಟ್ಟಬೇಕು ಮತ್ತು ಪುಷ್ಪೋದ್ಯಮವನ್ನು ಪ್ರೋತ್ಸಾಹಿಸಬೇಕು~ ಎಂದು ಭಾಸ್ಕರ್ ರೆಡ್ಡಿ ಕೇಳಿಕೊಂಡರು.

ದೊಡ್ಡಬಳ್ಳಾಪುರದ ಪುಷ್ಪೋದ್ಯಮಿ ಜಿ.ಪಿ.ರಾವ್, ನೆದರ್‌ಲೆಂಡ್‌ನ ಎಂ.ಆರ್. ಅಂಡ್ ಟಿಬಿವಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಥಿಯೋರೂಜಿಸ್ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT