ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ರಾಗ

Last Updated 8 ಜೂನ್ 2012, 19:30 IST
ಅಕ್ಷರ ಗಾತ್ರ

ಪಂಚರಂಗಿ

`ಗೌರಮ್ಮನಾಗಲೂ ಸಿದ್ಧ ಗ್ಲಾಮರ್‌ಗೂ ಸಿದ್ಧ~ ಎಂದರು ಶ್ರವಣ. ಆ ಮಾತಿಗೆ ಸ್ಪಷ್ಟನೆ ಎಂಬಂತೆ, `ಜನರಿಗೆ ಇಷ್ಟವಾದ ಪಾತ್ರಗಳನ್ನು ಮಾಡಲು ನನಗಿಷ್ಟ. ಜನ ನನ್ನನ್ನು ಬಿಕಿನಿಯಲ್ಲಿ ನೋಡಲು ಇಷ್ಟಪಟ್ಟರೆ ಅದನ್ನೂ ತೊಡುತ್ತೇನೆ. ಪ್ರೇಕ್ಷಕರು ಯಾವುದನ್ನು ನನ್ನಿಂದ ನಿರೀಕ್ಷಿಸುತ್ತಾರೆಯೋ ಅಂಥ ಪಾತ್ರಗಳನ್ನು ನಿರ್ವಹಿಸಿ ಅವರನ್ನು ಖುಷಿಪಡಿಸುವುದು ನನ್ನ ಕರ್ತವ್ಯ. ಅದಕ್ಕೆ ನಾನು ಬದ್ಧಳು~ ಎಂದರು.

ಅವರ ಮೂಲ ಹೆಸರು ಮೋನಿಶಾ ಸಾಗರ್. ಸಿನಿಮಾಗಾಗಿ ಬದಲಾದದ್ದು `ಶ್ರವಣ~ ಆಗಿ. ಮೊದಲ ಸಿನಿಮಾದಲ್ಲಿ ಶ್ರಾವಣಿ ಎಂಬ ನಾಮಕರಣವಾಗಿದ್ದರೂ ಇದೀಗ ಮತ್ತೆ ಶ್ರವಣ ಹೆಸರಿಗೇ ಜೈ ಅಂದಿದ್ದಾರೆ.

ಶ್ರವಣ ಮನೆ ಭಾಷೆ ಮಲಯಾಳಂ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಆದ ಕಾರಣ ಕನ್ನಡ ಮಾತನಾಡಬಲ್ಲರು. `ದೇವನಹಳ್ಳಿ~ ಅವರು ನಟಿಸಿದ ಮೊದಲ ಸಿನಿಮಾ. ಅದು ನಾಲ್ಕು ವರ್ಷಗಳ ಹಿಂದೆ ಮುಹೂರ್ತ ಕಂಡು ಇದೀಗ ತೆರೆಗೆ ಬರಲು ಸಿದ್ಧವಾಗಿದೆ.

ಅದರ ನಡುವೆ `ಆಟೋ~ ಮತ್ತು `ಬಣ್ಣ ಬಣ್ಣದ ಲೋಕ~ ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ಅವು ಅವಕಾಶಗಳನ್ನು ತಂದುಕೊಡಲಿಲ್ಲ. `ಇದೀಗ ಕನ್ನಡದಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ ಅದನ್ನು ಸದ್ಯಕ್ಕೆ ಹೇಳುವುದಿಲ್ಲ~ ಎನ್ನುತ್ತಾರೆ.

ಭರತನಾಟ್ಯದ ಶಾಸ್ತ್ರೀಯ ಅಭ್ಯಾಸ ಮಾಡಿರುವ ಶ್ರವಣ ಅವರಿಗೆ ಸಾಹಿತ್ಯದಲ್ಲಿ ಪದವಿ ಪಡೆಯುವ ಮಹದಾಸೆ. `ನೃತ್ಯ ಕಲಾವಿದೆಯಾದ ಕಾರಣ ನಟಿಸುವಾಸೆ ಬಂತು~ ಎನ್ನುವ ಅವರಿಗೆ ಸಿನಿಮಾ ಆಕರ್ಷಕವಾಗಿ ಕಂಡಿದೆ.

`ನಟನೆಗೆ ತರಬೇತಿಯ ಅಗತ್ಯ ಇಲ್ಲ~ ಎಂದು ಸಾರುವ ಶ್ರವಣಗೆ ಅತಿಯಾದ ಸಿದ್ಧತೆ ಮಾಡಿಕೊಂಡು ಸೆಟ್‌ಗೆ ಹೋದಾಗ ಸಂಭಾಷಣೆ ಮರೆತು ಹೋಗುವುದಂತೆ. ಖಾಲಿ ಮನಸ್ಸಿನಿಂದ ಸೆಟ್‌ಗೆ ಹೋಗಿ ನಿರ್ದೇಶನದ ಅಣತಿಯಂತೆ ನಟಿಸುವುದಾಗಿ ಹೇಳುವ ಅವರು ಎಲ್ಲಾ ಭಾಷೆಯ ಚಿತ್ರಗಳಲ್ಲೂ ನಟಿಸುವಾಸೆ ವ್ಯಕ್ತಪಡಿಸುತ್ತಾರೆ. ಇದೀಗ ಮಲಯಾಳಂ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ತೆಲುಗು ಚಿತ್ರವೊಂದರ ಮಾತುಕತೆಯಲ್ಲೂ ಬಿಜಿಯಾಗಿದ್ದಾರೆ. ಚದುರಂಗದಾಟ ಮತ್ತು ಪುಸ್ತಕ ಓದುವುದು ಇಷ್ಟ. ಕಲೆಯೇ ಬದುಕು ಎಂದು ನಿರ್ಧರಿಸಿದ್ದಾರೆ.

`ಭಾರತೀಯಳಾಗಿ ಅದರಲ್ಲೂ ಕಲಾವಿದೆಯಾಗಿ ಎಲ್ಲಾ ಭಾಷೆಯನ್ನು ಸಮಾನ ದೃಷ್ಟಿಯಿಂದ ನೋಡುವ ಮನೋಭಾವ ಬಂದಿದೆ. ಯಾವುದೇ ಭಾಷೆಯಾದರೂ ಅಡ್ಡಿಯಿಲ್ಲ. ನನ್ನ ಅಭಿನಯ ಸಾಮರ್ಥ್ಯ ತೋರುವೆ~ ಎನ್ನುತ್ತಾರೆ.

ಕಣ್ಣ ತುಂಬಾ ಕನಸುಗಳನ್ನು ಹೊತ್ತು ಸಾಗುತ್ತಿರುವ ಶ್ರವಣ ಉತ್ತಮ ಅವಕಾಶಗಳನ್ನು ನಿರೀಕ್ಷಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT