ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಾರ್ ಸಂಗೀತ ಸಂಸ್ಥೆ ಆರಂಭ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಇತ್ತೀಚೆಗೆ ‘ಶ್ರೀಕಾರ್ ಸುಗಮ ಸಂಗೀತ’ ಸಂಸ್ಥೆಯು ತನ್ನ ಕಾರ್ಯಾರಂಭವನ್ನು ಮಾಡಿತು. ಇದರ ಮೊದಲ ಕಾರ್ಯಕ್ರಮದಲ್ಲಿ ಮೂವತ್ತು ಭಾವಗೀತೆಗಳನ್ನು ನಯನ ಸಭಾಂಗಣದಲ್ಲಿ ಈಚೆಗೆ ಪ್ರಸ್ತುತಪಡಿಸಲಾಯಿತು.

ಇದರಲ್ಲಿ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ದೊಡ್ಡರಂಗೇಗೌಡ ಗೀತೆಗಳೊಂದಿಗೆ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರ ಹಲವು ವೈವಿಧ್ಯಮಯ ಗೀತೆಗಳು ಇದ್ದವು. ಇದರೊಂದಿಗೆ ಈ ಸಂಸ್ಥೆಯು ಅಧ್ಯಕ್ಷ ಹಾಗೂ ಸಂಗೀತ ನಿರ್ದೇಶಕ ಕೆ.ವಿ.ರವಿಚಂದ್ರ ಅವರ ನಿರ್ದೇಶನದ ಹಾಗೂ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರ ಸಾಹಿತ್ಯದ ‘ನೀನೇ ನನ್ನ ಕಣ್ಣು’ ಎಂಬ ಆಡಿಯೊ ಸಿ.ಡಿ.ಯನ್ನು ಬಿಡುಗಡೆ ಮಾಡಲಾಯಿತು.

ಇದರಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರು, ರಮೇಶ್ಚಂದ್ರ, ಅಜೇಯ್ ವಾರಿಯರ್, ಶಶಿಧರ ಕೋಟೆ, ಕೆ.ವಿ.ರವಿಚಂದ್ರ, ಕೇಶವರಾಜು, ರಶ್ಮಿ ಮಹದೇವ್ ಅವರು ಹಾಡಿರುವಹನ್ನೆರಡು ಗೀತೆಗಳಿವೆ. ಈ ಸಿ.ಡಿ.ಯನ್ನು ಆನಂದ್ ಆಡಿಯೊ ಕಂಪೆನಿ ಹೊರತಂದಿದೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಎಲ್ಲ ಹಾಡುಗಳನ್ನು ವೃತ್ತಿಪರವಾಗಿ ಈ ಕಲಾವಿದರು ಪ್ರಸ್ತುತಪಡಿಸಿದರು.  ಟಿ.ಎಸ್.ನಾಗಾಭರಣ, ಸಿ.ವಿ.ಶಿವಶಂಕರ್, ವೈ.ಕೆ.ಮುದ್ದುಕೃಷ್ಣ ಮುಂತಾದವರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT