ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ಮರ ಕಳ್ಳರ ಬಂಧನ

Last Updated 18 ಸೆಪ್ಟೆಂಬರ್ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಗಂಧದ ಮರ ಕಳವು ಮಾಡಿ ಆಂಧ್ರದ ತೈಲ ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು  ಬಂಧಿಸಿ­ರುವ  ಯಶ­ವಂತಪುರ ಪೊಲೀಸರು, ರೂ. 50,000 ಮೌಲ್ಯದ ಗಂಧದ ತುಂಡು­ಗಳು, ಕಾರು  ಮತ್ತು ಬೈಕ್‌ ವಶಪಡಿಸಿಕೊಂಡಿದ್ದಾರೆ.

ನಾಗವಾರದ ಅಮ್ಜದ್‌ವುಲ್ಲಾ (45), ಥಣಿಸಂದ್ರದ ಮುಜಾಹಿದ್‌­ವುಲ್ಲಾ (19), ಸಾರಾಯಿ ಪಾಳ್ಯದ ಇಮ್ಜಾದ್ ವುಲ್ಲಾ (20), ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕುಮಾರ (30), ಆಂಧ್ರ ಮೂಲದ   ರಮಣ (28), ರಂಗನಾಥ (35) ಬಂಧಿತರು.

ದಿನವಿಡೀ ನಗರವನ್ನು ಸಂಚರಿಸುತ್ತಿದ್ದ ಆರೋಪಿಗಳು, ಸರ್ಕಾರಿ ಕಚೇರಿ, ಮನೆ ಆವ­ರಣ ಸೇರಿದಂತೆ ವಿವಿಧೆಡೆ ಬೆಳೆದಿರುವ ಶ್ರೀಗಂಧದ ಮರಗಳನ್ನು ಗುರುತಿಸಿ ಹೊಂಚು ಹಾಕುತ್ತಿದ್ದರು. ರಾತ್ರಿ ವೇಳೆ ಸ್ಥಳಕ್ಕೆ ಹೋಗಿ ಆ ಮರಗಳನ್ನು ಕಳವು ಮಾಡುತ್ತಿದ್ದರು, ನಂತರ ಅವುಗಳನ್ನು ಆಂಧ್ರಪ್ರದೇಶದ ಅಮರಾಪುರದಲ್ಲಿರುವ ತೈಲ ಕಾರ್ಖಾನೆ­ಯೊಂದಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇತ್ತೀಚೆಗೆ ಶ್ರೀಗಂಧದ ಮರ ಕಳವು ಮಾಡುವಾಗ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರ ವಿರುದ್ಧ ಗಂಗಮ್ಮನಗುಡಿ, ಸದಾಶಿವನಗರ, ಜಾಲಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT