ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿಧಿಯಲ್ಲಿ ಮಧುಮೇಹ ಶಿಬಿರ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜಯನಗರದ ಶ್ರೀನಿಧಿ ಡಯಾಬಿಟಿಕ್ ಸೆಂಟರ್ ಅ. 29ರಿಂದ ನ. 10ರ ವರೆಗೆ 4ನೇ ವರ್ಷದ ಮಧುಮೇಹದ ವಿಶೇಷ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಸಲಿದೆ.

ಮಧುಮೇಹವನ್ನು ಸಕಾಲಕ್ಕೆ ಗುರುತಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಹೃದಯ, ಮೂತ್ರಪಿಂಡ ಹಾಗು ಕಾಲಿನ ನರಗಳಿಗೆ ಹಾನಿಯಾಗುವ ಸಂಭವ ಹೆಚ್ಚು. ಹಾಗಾಗಿ ಈ ಶಿಬಿರದಲ್ಲಿ ಇದಕ್ಕೆಲ್ಲಾ ವಿಶೇಷ ಗಮನ ಕೊಡಲಾಗುವುದು ಎನ್ನುತ್ತಾರೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವೀಂದ್ರ.

ಕಾಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುವುದರಿಂದ ಮಧುಮೇಹಿಗಳಲ್ಲಿ ಕಾಲಿನ ಉರಿ ಹೆಚ್ಚು  ಮತ್ತು  ಸ್ಪರ್ಶಜ್ಞಾನ ಕಡಿಮೆ.  ಇದನ್ನು ನಿರ್ದಿಷ್ಟವಾಗಿ ತಿಳಿಯಲು ಪಿಎಡಿ ಮತ್ತು ಬಯೊಥೆಸಿಮೀಟರ್ ಪರೀಕ್ಷೆ ಮಾಡಲಾಗುವುದು. ಇದರಿಂದ ಗಾಯ, ಸೋಂಕು, ಗ್ಯಾಂಗ್ರೀನ್ ಸ್ಥಿತಿಯಿಂದ ಪಾರಾಗಬಹುದು.

ಅಲ್ಲದೆ ಎಫ್‌ಬಿಎಸ್, ಪಿಪಿಬಿಎಸ್, ಲಿಪಿಡ್ ಪ್ರೊಫೈಲ್, ರೀನಲ್ ಪ್ರೊಫೈಲ್, ಮೂತ್ರ ಪರೀಕ್ಷೆ, ರಕ್ತದ ವಿವಿಧ ತಪಾಸಣೆ ಸಹ ಮಾಡಲಾಗುವುದು.

ಇದಲ್ಲದೆ ಏಚಿಅ1್ಚ ಎಂಬ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದರಿಂದ ಕಳೆದ ಮೂರು ತಿಂಗಳ  ಸಕ್ಕರೆ ಕಾಯಿಲೆಯ ಸ್ಥಿತಿ ತಿಳಿಯಬಹುದು. ಏಚಿಅ1್ಚ ಫಲಿತಾಂಶ ಶೇಕಡಾ 7 ಕ್ಕಿಂತಲೂ ಕಡಿಮೆ ಇದ್ದರೆ ಮಧುಮೇಹ ಉತ್ತಮ ಹಿಡಿತದಲ್ಲಿದೆ ಎಂದರ್ಥ.

ಮಧುಮೇಹಿಗಳು ದೃಷ್ಟಿದೋಷದಿಂದ ಪಾರಾಗಲು ಕನಿಷ್ಠ ವರ್ಷಕ್ಕೊಮ್ಮೆಯಾದರೂ ನೇತ್ರ ತಪಾಸಣೆ ಮಾಡಿಸಬೇಕಾಗುತ್ತದೆ. ಈ ಶಿಬಿರದಲ್ಲಿ ನುರಿತ ವೈದ್ಯರು ನೇತ್ರ ತಪಾಸಣೆ ನಡೆಸಲಿದ್ದಾರೆ.

ಆಸಕ್ತರು ಮುಂಚಿತವಾಗಿ ನೋಂದಾಯಿಸಬೇಕು. ಮೊದಲು ಬಂದವರಿಗೆ ಆದ್ಯತೆ.
ಸ್ಥಳ: ಶ್ರೀನಿಧಿ ಡಯಾಬಿಟಿಕ್ ಸೆಂಟರ್, 16ನೇ ಮುಖ್ಯ ರಸ್ತೆ, ಬಿಇಎಸ್ ಕಾಲೇಜ್ ಮುಂಭಾಗ, ಜಯನಗರ 4ನೇ ಬ್ಲಾಕ್. ದೂ: 2665 1818 , 91413 35858. ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT