ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪ್ರಸಾದ್‌ಗೆ ಹ್ಯಾಟ್ರಿಕ್‌ ಗೆಲುವು

ಚಾಮರಾಜನಗರ ಲೋಕಸಭಾ ಚುನಾವಣೆ-- – 1984
Last Updated 28 ಮಾರ್ಚ್ 2014, 6:53 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಜಾತಿ ಮೀಸಲು) 1989ರಲ್ಲಿ ನಡೆದ ಚುನಾವಣೆಯಲ್ಲಿ ಶೇ 74.46ರಷ್ಟು ಮತದಾನವಾಗಿತ್ತು. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ!

ಒಟ್ಟು 13 ಚುನಾವಣೆಗಳನ್ನು ಕಂಡಿರುವ ಈ ಲೋಕಸಭಾ

ಕ್ಷೇತ್ರದಲ್ಲಿ ಇಷ್ಟು ಪ್ರಮಾಣದಲ್ಲಿ ಮತದಾನ ನಡೆದಿರಲಿಲ್ಲ. ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಳಕ್ಕೆ ಹಲವು ಕಸರತ್ತು ಕೈಗೊಂಡರೂ ಇತ್ತೀಚಿನ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಶೇ 75ರಷ್ಟು ದಾಟಿಲ್ಲ.

1989ರ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 9,42,450 ಮತದಾರರು ಇದ್ದರು. ಇವರಲ್ಲಿ 7,01,779 ಮತದಾರರು ಹಕ್ಕು ಚಲಾಯಿಸಿದ್ದರು. ಒಟ್ಟು 6,65,298 ಮತಗಳು ಸಿಂಧು ಗೊಂಡಿದ್ದವು.

ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ವಿ. ಶ್ರೀನಿವಾಸಪ್ರಸಾದ್‌ ಚಲಾವಣೆ ಗೊಂಡಿದ್ದ ಮತಗಳಲ್ಲಿ 3,66,922 ಮತ ಪಡೆದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಜಯ ದಾಖಲಿಸಿದರು. 1980 ಮತ್ತು 1984ರ ಲೋಕಸಭಾ ಚುನಾವಣೆಯಲ್ಲೂ ಅವರು ಜಯಭೇರಿ ಬಾರಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟಾರೆ ಶೇ 55.10ರಷ್ಟು ಮತ ಪಡೆದು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸಿದರು.

ಕಾಂಗ್ರೆಸ್‌ ಸೋಲಿಸಲು ಜನತಾದಳ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಸಿತ್ತು. ಆದರೆ, ಕೈ ಪಾಳಯದ ಅಬ್ಬರದ ಮುಂದೆ ಯಾವುದೇ ತಂತ್ರಗಾರಿಕೆ ಫಲಿಸಲಿಲ್ಲ. ಜನತಾದಳದಿಂದ ಅಖಾಡಕ್ಕೆ ಧುಮುಕಿದ್ದ ದೇವನೂರು ಶಿವಮಲ್ಲು 2,13,277 ಮತ ಪಡೆದು ಪರಾಭವಗೊಂಡರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT