ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: 2 ನಾಮಪತ್ರ ತಿರಸ್ಕೃತ

Last Updated 19 ಏಪ್ರಿಲ್ 2013, 5:58 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸಲ್ಲಿಕೆಯಾಗಿದ್ದ 27 ನಾಮಪತ್ರಗಳ ಪೈಕಿ 2 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಸಲ್ಲಿಸಿದ್ದ 4 ನಾಮಪತ್ರಗಳ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸಲ್ಲಿಸಿದ್ದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ. ರವೀಂದ್ರ ಶ್ರೀಕಂಠಯ್ಯ ನಾಮಪತ್ರಗಳ ಜತೆಗೆ ಕಾಂಗ್ರೆಸ್ ಪಕ್ಷದ ಎ ಮತ್ತು ಬಿ ಫಾರಂಗಳನ್ನು ನೀಡಿಲ್ಲದ ಕಾರಣ ಎರಡು ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅವರು ಪಕ್ಷೇತರ ಅಭ್ಯಥಿಯಾಗಿ ಸಲ್ಲಿಸಿದ್ದ 2 ನಾಮಪತ್ರಗಳು ಊರ್ಜಿತವಾಗಿವೆ ಎಂದು ಚುನಾವಣಾಧಿಕಾರಿ ತಬಸ್ಸುಮ್ ಜಹೇರಾ ತಿಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ, ಶಾಸಕ ರಮೇಶ ಬಂಡಿಸಿದ್ದೇಗೌಡ 4 ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ ಬಿ ಫಾರಂ ಸಹಿತ ಸಲ್ಲಿಸಿದ್ದ ನಾಮಪತ್ರ ಸಿಂಧುವಾಗಿದೆ. ಉಳಿದ ಮೂರು ನಾಮಪತ್ರಗಳನ್ನು ವಜಾ ಮಾಡಲಾಗಿದೆ. ಒಟ್ಟು 27 ನಾಮಪತ್ರಗಳಲ್ಲಿ 6 ನಾಮಪತ್ರಗಳು ವಜಾಗೊಂಡಿವೆ. ಏ.17ರ ವರೆಗೆ 19 ಮಂದಿ ನಾಮಪತ್ರ ಸಲ್ಲಿಸಿದ್ದು, ಎಲ್ಲ ಅಭ್ಯರ್ಥಿಗಳ ಒಂದೊಂದು ನಾಮಪತ್ರಗಳು ಊರ್ಜಿತವಾಗಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT