ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಮನೆ ವಶಕ್ಕೆ ಪಡೆಯುವುದಿಲ್ಲ- ಸ್ಪಷ್ಟನೆ

Last Updated 7 ಅಕ್ಟೋಬರ್ 2011, 5:35 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ (ಎಎಸ್‌ಐ) ವ್ಯಾಪ್ತಿಗೆ ಸೇರುವ ಪಟ್ಟಣದ ಸ್ಮಾರಕಗಳ 300 ಮೀಟರ್ ಪ್ರದೇಶದಲ್ಲಿ ಸರ್ವೆ ನಡೆಸುತ್ತಿದ್ದು, ಯಾವುದೇ ಕಟ್ಟಡ ಅಥವಾ ನಿವೇಶನ ವಶಪಡಿಸಿಕೊಳ್ಳುವುದಿಲ್ಲ ಎಂದು ಎಎಸ್‌ಐ ಬೆಂಗಳೂರು ವಲಯದ ಉಪ ಅಧೀಕ್ಷಕ ಪುರಾತತ್ವವಿಧರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತ ಪತ್ರವನ್ನು ಪಟ್ಟಣ ಪುರಸಭೆಗೆ ಅವರು ರವಾನಿಸಿದ್ದಾರೆ. ಸೆ.24ರಂದು ಪುರಸಭೆ ತುರ್ತು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ವಲಯ ಕಚೇರಿಗೆ ಕಳುಹಿಸಿದ್ದ ಮೇರೆಗೆ ಈ ಪತ್ರ ಬಂದಿದೆ. ಸ್ಮಾರಕಗಳ 300 ಮೀ. ವ್ಯಾಪ್ತಿಯಲ್ಲಿನ ಮನೆ, ನಿವೇಶನ ವಶಪಡಿಸಿಕೊಳ್ಳುವ ಇರಾದೆ ಇಲ್ಲ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಬೈಲಾಗಳನ್ನು ಮಾಡುವ ಸಲುವಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ನಾಗರಿಕರು ಸ್ಮಾರಕ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಸಮಕ್ಷಮ ಪ್ರಾಧಿಕಾರದಿಂದ ಅನುಮತಿಗೆ ಬರೆದುಕೊಂಡ ಪತ್ರಗಳ ಶೀಘ್ರ ವಿಲೇವಾರಿಗೆ ಅನುಕೂಲ ಆಗುತ್ತದೆ ಎಂದರು.

ಕೇಂದ್ರ ಸಂರಕ್ಷಿತ ಸ್ಮಾರಕಗಳ 300 ಮೀಟರ್ ವ್ಯಾಪ್ತಿಯ ಯಾವುದೇ ಕಟ್ಟಡ ತೆರವುಗೊಳಿಸುವುದಿಲ್ಲ, ವಶಪಡಿಸಿಕೊಳ್ಳುವುದೂ ಇಲ್ಲ. ಸ್ಮಾರಕಗಳ 300 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಿಂದ ಪೂರ್ವಾನತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಕಟ್ಟಡಗಳನ್ನು 2010ರ ಅಧಿನಿಯಮದ ಪ್ರಕಾರ ಅನಧಿಕೃತ ಎಂದು ತೀರ್ಮಾನಿ ಸಲಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಪುರಸಭೆ ಅಧ್ಯಕ್ಷ ಶಿವಾಜಿರಾವ್, ಎಎಸ್‌ಐ ಉಪ ಅಧೀಕ್ಷಕ ಪುರಾತತ್ವವಿಧರ ಪತ್ರದಿಂದ ಗೊಂದಲ ನಿವಾರಣೆಯಾಗಿದೆ. ಸರ್ವೆ ನಡೆಯುತ್ತಿರುವುದಕ್ಕೆ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT