ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ತಮಿಳರ ಪುನರ್ವಸತಿಗೆ ಗರಿಷ್ಠ ಆದ್ಯತೆ: ಪ್ರಧಾನಿ ಸಿಂಗ್

Last Updated 2 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಪುನರ್ವಸತಿಗೆ  `ಗರಿಷ್ಠ ಹಾಗೂ ಹೆಚ್ಚಿನ ಆದ್ಯತೆ~ಯನ್ನು ಭಾರತ ನೀಡಲಿದೆ ಮತ್ತು `ಭವಿಷ್ಯ~ದಲ್ಲಿ ಇದನ್ನು ಕಾರ್ಯಗತಗೊಳಿಸಲು ಕೊಲಂಬೊವನ್ನು ಅದರಲ್ಲಿ ತೊಡಗಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರಿಗೆ ಆಗಸ್ಟ್ 20 ರಂದು ಪತ್ರ ಬರೆದಿದ್ದು, ಅದರಲ್ಲಿ ಈ ವಿಷಯವನ್ನು ಪ್ರಧಾನಿ ಪುನರ್ ಪ್ರಸ್ತಾಪಿಸಿದ್ದಾರೆ. ಅಲ್ಲಿನ ಸಂಘರ್ಷ ಮುಗಿದಿರುವುದರಿಂದ ತಮಿಳು ನಾಗರಿಕರ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನವದೆಹಲಿ ಗಮನ ಹರಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

`ಅಲ್ಲಿನ ತಮಿಳು ಸಮುದಾಯದವರಿಗೆ ಪುನರ್ವಸತಿಯನ್ನು ಕಲ್ಪಿಸುವುದು ನಮ್ಮ ಸರ್ಕಾರದ ಮಹತ್ವವಾದ, ಪ್ರಮುಖ ಮತ್ತು ಪ್ರಥಮ ಆದ್ಯತೆಯಾಗಿದೆ~ ಎಂದು ಸಿಂಗ್ ಅವರು ಪ್ರಸ್ತಾಪಿಸಿರುವ ವಿಷಯದ ಪತ್ರ ಮಂಗಳವಾರ ಸುದ್ದಿ ಮಾಧ್ಯಮ ಸಂಸ್ಥೆಗಳಿಗೆ ಬಿಡುಗಡೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT