ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಾಯುಪಡೆ ಸಿಬ್ಬಂದಿ ತರಬೇತಿ ತಡೆಯಲು ನಿರಾಕರಿಸಿದ ಸುಪ್ರೀಂ

Last Updated 8 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ರಕ್ಷಣಾ ಇಲಾಖೆಯಿಂದ ಶ್ರೀಲಂಕಾ ವಾಯುಪಡೆ ಸಿಬ್ಬಂದಿಗೆ ತರಬೇತಿ ನೀಡುತ್ತಿರುವುದನ್ನು ತಡೆಯಲು ಸೋಮವಾರ ನಿರಾಕರಿಸಿರುವ ಸುಪ್ರೀಂ ಕೋರ್ಟ್ ತರಬೇತಿ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದಾದ್ದರಿಂದ ತಾನು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲಾರೆ ಎಂದು ಹೇಳಿದೆ.

ಶ್ರೀಲಂಕಾ ಯೋಧರಿಗೆ ಕೇಂದ್ರ ರಕ್ಷಣಾ ಇಲಾಖೆಯಿಂದ ನೀಡುತ್ತಿರುವ ತರಬೇತಿಯನ್ನು ತಡೆಹಿಡಿಯಬೇಕೆಂದು ಕೋರಿ ಎನ್.ರಾಜಾ ರಾಮನ್ ಎಂಬುವವರು ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಆಫ್ತಾಬ್ ಆಲಂ ನೇತೃತ್ವದ ನ್ಯಾಯಪೀಠವು ಅರ್ಜಿಯು `ತಪ್ಪು ಗ್ರಹಿಕೆ~ಯಿಂದ ಕೂಡಿದೆ ಎಂದು ಹೇಳಿ ವಜಾಗೊಳಿಸಿತು.

ಕರ್ನಾಟಕದ ವಾಯುಪಡೆ ತರಬೇತಿ ಕೇಂದ್ರವೊಂದರಲ್ಲಿ ಶ್ರೀಲಂಕಾ ವಾಯುಪಡೆಗೆ ಸೇರಿದ 9 ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕ ಹೋರಾಟ ನಡೆಸಿದ್ದ ರಾಜಾ ರಾಮನ್ ಅವರು ತರಬೇತಿಗೆ ತಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT