ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧ ಆರ್ಥಿಕ ನಿರ್ಬಂಧನೆ ನಿರ್ಣಯ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ಶ್ರೀಲಂಕಾದ ವಿರುದ್ಧ ಕೇಂದ್ರ ಸರ್ಕಾರ ಆರ್ಥಿಕ ನಿರ್ಬಂಧನೆ ಹೇರಬೇಕೆಂದು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಬುಧವಾರ ಅವಿರೋಧವಾಗಿ ಅಂಗೀಕರಿಸಿದೆ.

ಶ್ರೀಲಂಕಾದಲ್ಲಿರುವ ತಮಿಳರ ಸುರಕ್ಷೆಗೆ ಆಗ್ರಹಿಸಿರುವ ನಿರ್ಣಯ, ಅವರ ವಿರುದ್ಧದ ಮಾನವ ಹಕ್ಕು ಉಲ್ಲಂಘನೆಯನ್ನು ಖಂಡಿಸಿದೆ.

ದ್ವೀಪ ರಾಷ್ಟ್ರದಲ್ಲಿ ಸಂಘರ್ಷದ ಅವಧಿಯಲ್ಲಿ ಆಗಿರುವ ಅಪರಾಧಗಳಿಗೆ ಕಾರಣರಾದವರನ್ನು ಯುದ್ಧ ಅಪರಾಧಿಗಳೆಂದು ಪರಿಗಣಿಸುವಂತೆ ವಿಶ್ವಸಂಸ್ಥೆಯನ್ನು ಭಾರತ ಒತ್ತಾಯಿಸಬೇಕು ಎಂದು ಹೇಳಿದೆ.

ಆರ್ಥಿಕ ನಿರ್ಬಂಧನೆಗಳಿಂದ ಮಾತ್ರ ಶ್ರೀಲಂಕಾವನ್ನು ನಿಯಂತ್ರಿಸಬಹುದಾಗಿದೆ ಎಂದಿರುವ ಮುಖ್ಯಮಂತ್ರಿ ಜಯಲಲಿತಾ, ತಮಿಳರ ವಿಷಯ ಬಂದಾಗ ಜಾಗತಿಕ ಅಭಿಪ್ರಾಯ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT