ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲ ಹಿರಿಯ ಸ್ವಾಮೀಜಿ ಇನ್ನಿಲ್ಲ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪಂಚ ಪೀಠಗಳಲ್ಲಿ ಒಂದಾದ  ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶನಿವಾರ ಬೆಳಿಗ್ಗೆ 7.05ಕ್ಕೆ ನಗರದ ಪಂಚಾಚಾರ್ಯ ಮಂದಿರದಲ್ಲಿ ಲಿಂಗೈಕ್ಯರಾದರು.

ತೀವ್ರ ಅಸ್ವಸ್ಥರಾಗಿದ್ದ ಸ್ವಾಮೀಜಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಸ್ವಾಮೀಜಿ ಅವರ ಇಚ್ಛೆಯಂತೆ ದಾವಣಗೆರೆಯಲ್ಲಿನ ಮಠಕ್ಕೆ ಕರೆ ತರಲಾಗಿತ್ತು.

ಶ್ರೀಗಳ ಪಾರ್ಥಿವ ಶರೀರವನ್ನು ಪಂಚಾಚಾರ್ಯ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಸ್ವಾಮೀಜಿ ನಿಧನದ ಸುದ್ದಿ ತಿಳಿದ ಕೂಡಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದರು.

ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎಚ್.ಎಸ್. ಶಿವಯೋಗಿಸ್ವಾಮಿ, ಹರಿಹರದ ಶಾಸಕ ಬಿ.ಪಿ. ಹರೀಶ್, ಅಥಣಿ ವೀರಣ್ಣ, ಹೊನ್ನಾಳಿಯ ಒಡೆಯರ್ ಚಂದ್ರಶೇಖರ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಅಂಬಿಕಾನಗರ ಸ್ವಾಮೀಜಿ, ಹೆಬ್ಬಾಳು ಮಹಾಂತರುದ್ರ ಸ್ವಾಮೀಜಿ, ಮುದೇನೂರು ಸ್ವಾಮೀಜಿ, ರಾಮಘಟ್ಟದ ರೇವಣಸಿದ್ದ ಸ್ವಾಮೀಜಿ, ದುಗ್ಗತ್ತಿ ಸ್ವಾಮೀಜಿ, ಚನ್ನಸಿದ್ದರಾಮ ಪಂಡಿತಾರಾಧ್ಯ ಜಗದ್ಗುರು ಮತ್ತಿತರರು ಸ್ವಾಮೀಜಿಗಳು ಅವರ ಅಂತಿಮ ದರ್ಶನ ಪಡೆದರು.

ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ 1949ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಸವನಬಾಗೇವಾಡಿಯಲ್ಲಿ ಪಡೆದ ಅವರು, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಮತ್ತು ಕಾಶಿ ವಿದ್ಯಾಪೀಠದಿಂದ ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದ್ದಿದರು.
 
1981ರಲ್ಲಿ ಶ್ರೀಶೈಲ ಪೀಠದ 31ನೇ ಜಗದ್ಗುರುಗಳಾಗಿ ಅಧಿಕಾರ ವಹಿಸಿಕೊಂಡ ಅವರು ತಮ್ಮ ನೇರ ನುಡಿ, ಸರಳ ವ್ಯಕ್ತಿತ್ವದಿಂದ ಅಪಾರ ಸಂಖ್ಯೆಯ ಭಕ್ತರನ್ನು ಗಳಿಸಿದ್ದರು. ಶ್ರೀಶೈಲ ಪೀಠದಲ್ಲಿ ಅನೇಕ ಬದಲಾವಣೆ ತರುವ ಮೂಲಕ ಹೊಸತನ ಹಾಗೂ ಅಭಿವೃದ್ಧಿಗೂ ಅವರು ಕಾರಣಕರ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT