ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾಸಕೋಶಗಳೂ ವಾಸನೆ ಗ್ರಹಿಸಬಲ್ಲವು!

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವಾಸನೆ ಗ್ರಹಿಸುವ ಸಾಮರ್ಥ್ಯ ಇರುವುದು ಮೂಗಿಗೆ ಮಾತ್ರ ಎಂಬುದು ಇದುವರೆಗಿನ ನಂಬಿಕೆ. ಇದಕ್ಕೆ ಅಪವಾದವೆಂಬಂತೆ, ಮಾನವನ ಶ್ವಾಸಕೋಶ ಕೂಡ ವಾಸನೆ ಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂಬ ಸತ್ಯವನ್ನು ಅಮೆರಿಕ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ

‘ಮೂಗಿನ ಹೊಳ್ಳೆಯಲ್ಲಿರುವಂತೆಯೇ ಪುಪ್ಪುಸದಲ್ಲಿರುವ ಸೂಕ್ಷ್ಮ ನರಕೋಶಗಳು ವಾಸನೆ ಗ್ರಹಿಸಬಲ್ಲವು. ಆದರೆ, ಇವು ವಾಸನೆ ಗ್ರಹಿಕೆಯ ಸಂದೇಶವನ್ನು ಮಿದುಳಿಗೆ  ರವಾನಿಸುವುದಿಲ್ಲ’ ಎಂದು ಸೇಂಟ್‌ ಲೂಯಿಸ್‌­ನಲ್ಲಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಯೆಹೂದ್ ಬೆನ್‌ಶೆಹಾರ್‌ ಹೇಳುತ್ತಾರೆ.

ಸಿಗರೇಟ್‌ ಹೊಗೆಯಂತಹ ತೀಕ್ಷ್ಣ ವಾಸನೆ ಗುರುತಿಸುವ ಸಾಮರ್ಥ್ಯ ಹೊಂದಿರುವ ಶ್ವಾಸಕೋಶದ ಈ ಸೂಕ್ಷ್ಮ ನರಕೋಶಗಳು ಮಿದುಳಿಗೆ ಸಂದೇಶ ಕಳಿಸುವ ಬದಲು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡಿ ತಾವೇ ಪರಿಸ್ಥಿತಿ­ಯನ್ನು ನಿರ್ವಹಿಸುತ್ತವೆ.  ಶ್ವಾಸಕೋಶದಲ್ಲಿ  ಹೊಸದಾಗಿ ಪತ್ತೆಹಚ್ಚಲಾಗಿರುವ ವಾಸನೆ ಗ್ರಹಿಕೆ ಜೀವಕೋಶಗಳಿಗೆ ವಿಜ್ಞಾನಿಗಳು ‘ಪಲ್ಮನರಿ ನ್ಯೂರೋ ಎಂಡೋಕ್ರೈನ್‌ ಸೆಲ್‌’ ಅಥವಾ ‘ಪಿಎನ್‌ಇಸಿ’ ಎಂದು ಹೆಸರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT