ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಗಳ ಆಯ್ಕೆಯಲ್ಲಿ ಎಚ್ಚರ ಇರಲಿ

Last Updated 20 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮುಂಬೈ ಷೇರುಪೇಟೆಯಲ್ಲಿನ ವಹಿವಾಟು ನಕಾರಾತ್ಮಕವಾಗಿರಲಿದ್ದು, ದ್ವಿತೀಯಾರ್ಧದಲ್ಲಷ್ಟೇ ಚೇತರಿಸಿಕೊಳ್ಳಲಿದೆ ಎಂದು ಪ್ರಮುಖ ದಲ್ಲಾಳಿ ಸಂಸ್ಥೆಯೊಂದು ಅಂದಾಜು ಮಾಡಿದೆ.

ವರ್ಷದ ಮೊದಲಾರ್ಧದಲ್ಲಿ ಹಿನ್ನಡೆ ಕಾಣಲಿರುವ ಸಂವೇದಿ ಸೂಚ್ಯಂಕವು 16,000 ಅಂಶಗಳಿಂದ 20,000 ಅಂಶಗಳ ಮಧ್ಯೆ ಏರಿಳಿತ ಕಂಡು ವರ್ಷದ ಉಳಿದ ಅವಧಿಯಲ್ಲಿ ಮಾತ್ರ ಚೇತರಿಸಿಕೊಳ್ಳಲಿದೆ ಎಂದು ಏಂಜೆಲ್ ಬ್ರೋಕಿಂಗ್‌ನ ಮುಖ್ಯ ಹೂಡಿಕೆ ಅಧಿಕಾರಿ ರಾಜೇನ್ ಶಹಾ ಅಭಿಪ್ರಾಯಪಟ್ಟಿದ್ದಾರೆ.

ಏಂಜೆಲ್ ಬ್ರೋಕಿಂಗ್ ಸಂಸ್ಥೆಯು ಮುಂಬೈ ಷೇರುಪೇಟೆಯ ಸಹಯೋಗದಲ್ಲಿ ಇಲ್ಲಿ ಏರ್ಪಡಿಸಿದ್ದ ಹೂಡಿಕೆ ಅವಕಾಶಗಳು ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಹೂಡಿಕೆದಾರರಿಗೆ ಮಾಹಿತಿ ನೀಡುವ ಉದ್ದೇಶಕ್ಕೆ  ದೇಶದಾದ್ಯಂತ ಇಂತಹ ವಿಚಾರಸಂಕಿರಣ ಹಮ್ಮಿಕೊಳ್ಳಲಾಗುತ್ತಿದೆ.

ಸಾಮಾನ್ಯ ಹೂಡಿಕೆದಾರರು ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಮತ್ತು ಶಿಸ್ತಿನಿಂದ  ವರ್ತಿಸಬೇಕು. ಉತ್ತಮ ಆಡಳಿತ ಮತ್ತು ಪಾರದರ್ಶಕ ವಹಿವಾಟಿನಲ್ಲಿ ತೊಡಗಿರುವ ಉದ್ದಿಮೆ ಸಂಸ್ಥೆಗಳ ಷೇರುಗಳಲ್ಲಿ ಮಾತ್ರ ಹಣ ಹೂಡಿಕೆ ಮಾಡಬೇಕು ಎಂದು ಶಹಾ ಸಲಹೆ ನೀಡಿದರು.

ಮುಂಬೈ ಷೇರುಪೇಟೆಯ (ಬಿಎಸ್‌ಇ) ಸಹಯೋಗದಲ್ಲಿ ಏಂಜೆಲ್ ಬ್ರೋಕಿಂಗ್ ಸಂಸ್ಥೆಯು ತನ್ನ ಸಂಶೋಧನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡು ವ್ಯಾಪಕ ಪ್ರಮಾಣದ ಹೂಡಿಕೆದಾರರನ್ನು ತಲುಪಲು ಸಾಧ್ಯವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ದಿನೇಶ ಠಕ್ಕರ್ ನುಡಿದರು. 2011ರಲ್ಲಿ ಇದುವರೆಗೆ ಷೇರುಪೇಟೆ ವಹಿವಾಟು ಕೆಳಮುಖವಾಗಿ ಚಲಿಸುತ್ತಿದ್ದು, ಇದುವರೆಗೆ ಶೇ 10ರಷ್ಟು ವಹಿವಾಟು ಕಳೆದುಕೊಂಡಿದೆ.

ಹಣದುಬ್ಬರ ಒತ್ತಡವು ಆರ್ಥಿಕ ಬೆಳವಣಿಗೆಯ ಗತಿಯನ್ನು ತಗ್ಗಿಸಲಿದೆ ಎನ್ನುವ ಆತಂಕವು ಹೂಡಿಕೆದಾರರಲ್ಲಿ ಮನೆ ಮಾಡಿದ್ದರೂ, ಸೂಚ್ಯಂಕ ಕುಸಿದಿರುವ ಸದ್ಯದ ಸಂದರ್ಭದಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಲಾಭ ಇದೆ. ಇದು ಈ ಹಿಂದೆಯೂ ಸಾಕಷ್ಟು ಬಾರಿ ಸಾಬೀತಾಗಿದೆ ಎಂದೂ ಠಕ್ಕರ್ ನುಡಿದರು.

ರೆಲಿಗೇರ್ ಹೆಲ್ತ್ ಲೈನ್
ಬೆಂಗಳೂರು: ರೆಲಿಗೇರ್ ಟೆಕ್ನಾಲಜೀಸ್ 24 ಗಂಟೆಗಳ ಆರೋಗ್ಯ ಮಾಹಿತಿ ಸೇವೆ  ‘ಹೆಲ್ತ್‌ಲೈನ್ 24x7’ಗೆ ಗ್ರಾಹಕರು 080-3300 6666  ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT