ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೋಕಾಸ್ ನೋಟಿಸ್ ಜಾರಿಗೆ ನಿರ್ಧಾರ: ಮುಖ್ಯಾಧಿಕಾರಿ

ಸರಗೂರು ಪಟ್ಟಣ ಪಂಚಾಯಿತಿ: 14 ಸಿಬ್ಬಂದಿ ಸಾಮೂಹಿಕ ರಜೆ
Last Updated 21 ಡಿಸೆಂಬರ್ 2012, 8:16 IST
ಅಕ್ಷರ ಗಾತ್ರ

ಸರಗೂರು:  ಇಲ್ಲಿನ ಪಟ್ಟಣ ಪಂಚಾ ಯಿತಿಯ 14 ಸಿಬ್ಬಂದಿ ಸಾಂದರ್ಭಿಕ ರಜೆ ಹಾಕಿಕೊಂಡು ಮೂರು ದಿನ ದಿಂದ ಕಚೇರಿಗೆ ಹಾಜರಾ ಗಿಲ್ಲವಾಗಿದ್ದು, ಗುರುವಾರ ಪಂಚಾ ಯಿತಿ ಕಚೇರಿ ಬಣಗುಡುತ್ತಿತ್ತು.

ಕಚೇರಿಯ 14 ಸಿಬ್ಬಂದಿ ಸಾಮೂ ಹಿಕವಾಗಿ ಒಂದೇ ಪತ್ರದಲ್ಲಿ ಮುಖ್ಯಾ ಧಿಕಾರಿಯಿಂದ ಸಾಂದರ್ಭಿಕ ರಜೆ ಕೋರಿದ್ದಾರೆ. ರಜೆ ಪತ್ರವನ್ನು ಕಚೇ ರಿಯ ಪಿಜಿಆರ್‌ನಲ್ಲಿ ಕೆಲಸ ನಿರ್ವಹಿ ಸುವ ಪ್ರವೀಣ್ ಎಂಬುವರಿಗೆ ನೀಡಿದ್ದಾರೆ.

ಪಟ್ಟಣ ಪಂಚಾಯಿತಿ ವಿಜಯಕುಮಾರ್ ಮಾತನಾಡಿ 14 ಸಿಬ್ಬಂದಿ ಒಂದೇ ರಜಾ ಪತ್ರ ನೀಡಿರು ವುದು ನನ್ನ ಗಮನಕ್ಕೆ ಬಂದಿಲ್ಲ. ಪಿಜಿಆರ್‌ನಲ್ಲಿ ಒಂದೇ ಪತ್ರದಲ್ಲಿ ಎಲ್ಲರು ಸಹಿ ಮಾಡಿದ್ದಾರೆ. ಈ ನೌಕರರು ಮೊಬೈಲ್ ಸಂಪರ್ಕಕಕ್ಕೆ ಲಭ್ಯವಾಗಿಲ್ಲ.

ಈ 14 ಮಂದಿಗೂ ಷೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ. ನೌಕರರು ಕೆಲಸಕ್ಕೆ ಸಾಮೂಹಿಕ ರಜೆ ಪತ್ರ ನೀಡಿರುವ ಬಗ್ಗೆ ಜಿಲ್ಲಾಧಿಕಾರಿಗೆ  ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ರಮೇಶ್ ಪತ್ರಿಕೆ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆ ಸಾರ್ವಜನಿಕರ ಜೊತೆಗೂಡಿ ಪ್ರತಿಭಟನೆ ನಡೆಸಿ ಈ 14 ನೌಕರ ರನ್ನು ಬೇರೆ ಕಡೆ ವರ್ಗಾ ಯಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

 ನೌಕರರು ಸಾಮೂಹಿಕವಾಗಿ ರಜೆ ಹಾಕಿರುವ ಹಿನ್ನೆಲೆಯಲ್ಲಿ ಈ ಕಚೇರಿಗೆ ಸಂಬಂಧಿಸಿದ ಸಾರ್ವಜನಿಕರ ಕೆಲಸವನ್ನು ನಂತರದ ದಿನಗಳಲ್ಲಿ ಮಾಡಿಕೊಡಲು ಕ್ರಮ ವಹಿಸಲಾ ಗುವುದು ಎಂಬ ಮನವಿಯನ್ನು ಮುಖ್ಯಾಧಿಕಾರಿ ಸಹಿಯೊಂದಿಗೆ ನಾಮಫಲಕದಲ್ಲಿ ಅಂಟಿಸಲಾಗಿದೆ.

 ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ಪಂಚಾಯಿತಿ ಮುಖ್ಯಾಧಿಕಾರಿ ವಿಜಯ್‌ಕುಮಾರ್, ಎಂಜಿನಿಯರ್ ಸತ್ಯಕುಮಾರ್, ಪೌರಕಾರ್ಮಿಕರು, ನೀರುಗಂಟಿಗಳು ಕೆಲಸ ನಿರ್ವಹಿಸಿದ್ದಾರೆ.

ಆರೋಗ್ಯಾ ಧಿಕಾರಿ ನೇತ್ರಾವತಿ, ಕಂದಾಯ ಅಧಿಕಾರಿ ಪ್ರಭಾವತಿ, ಗುಮಾಸ್ತ ಕೆ.ಪಿ.ಲೋಕೇಶ್, ವಿನೋದ್, ಡಿ.ಎನ್.ನರಸಿಂಹಮೂರ್ತಿ, ಮಹ ದೇವ್, ನರಸಿಂಹಮೂರ್ತಿ, ಬಸವ ರಾಜು, ಸತೀಶ್ ಹಂಗಾಮಿ ಎಂಜನಿ ಯರ್ ಪ್ರಕಾಶ್, ಪಳನಿಸ್ವಾಮಿ, ಚಿಕ್ಕಬಣ್ಣಾರಿ, ಶ್ರೀನಿವಾಸ್, ಪರಮೇಶ್ ಮೂರು ದಿನದಿಂದ ಕಚೇರಿಗೆ ಹಾಜರಾಗಿಲ್ಲ ಎಂದು ನಮೂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT