ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಕಷ್ಟ'ಕ್ಕಾಗಿ ಅಣೆಕಟ್ಟೆ ನಿರ್ಮಿಸಿ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದಕ್ಕೆ ತೆರೆ ಎಳೆಯುವ ಉದ್ದೇಶದಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಜಂಟಿಯಾಗಿ ಅಣೆಕಟ್ಟೆಯೊಂದನ್ನು ನಿರ್ಮಿಸಬೇಕು. ಸಂಕಷ್ಟದ ಕಾಲದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಕ್ಕೆ ಈ ಅಣೆಕಟ್ಟೆಯನ್ನು ಬಳಸಿಕೊಳ್ಳಬೇಕು ಎಂದು ಚನ್ನರಾಯಪಟ್ಟಣದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ನೀಡಿದರು.

`ನಾನು ಶಾಸಕನಾದ ನಂತರವೇ 5ನೇ ಬಾರಿ ಸಮಸ್ಯೆ ಸೃಷ್ಟಿಯಾಗಿದೆ. ಒಮ್ಮೆ ವಿರೋಧ ಪಕ್ಷದ ಸಾಲಿನಲ್ಲಿ ಇದ್ದವರು ಮತ್ತೊಮ್ಮೆ ಆಡಳಿತ ಪಕ್ಷದ ಸಾಲಿಗೆ ಹೋದಾಗ ಹಿಂದಿನವರು ಮಾಡಿದ್ದನ್ನೇ ಮಾಡುತ್ತಾರೆ. ಇದರಿಂದಾಗಿ ನಮ್ಮ ಮನೆಗಾಗಿ ಇಟ್ಟುಕೊಂಡ ನೀರನ್ನು ಪದೇ ಪದೇ ಬೇರೆಯವರಿಗೆ ಕೊಡಬೇಕಾದ ಸ್ಥಿತಿ ಬಂದಿದೆ' ಎಂದು ವಿಶ್ಲೇಷಿಸಿದರು.

ಎರಡೂ ರಾಜ್ಯಗಳೂ ಸಹಮತಕ್ಕೆ ಬಂದು ಒಂದು ಪ್ರತ್ಯೇಕ ಅಣೆಕಟ್ಟೆ ನಿರ್ಮಿಸಬೇಕು. ಸಂಕಷ್ಟದ ಸಮಯದಲ್ಲಿ ನೀರು ಬಿಡಲು ಅದನ್ನು ಬಳಸಿಕೊಳ್ಳಬೇಕು. ಅವಕಾಶವಿದ್ದರೆ ವಿದ್ಯುತ್ ಉತ್ಪಾದನೆಯನ್ನೂ ಮಾಡಬೇಕು. ಆಡಳಿತ ಪಕ್ಷದಲ್ಲಿರುವವರು ಅಗ್ಗದ ಪ್ರಚಾರ ಕಾರ್ಯಕ್ರಮಗಳನ್ನುಯ ಬದಿಗೊತ್ತಿ ಇಂತಹ ಯೋಜನೆಗಳತ್ತ ಗಮನಹರಿಸಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT