ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಭಾರತದ ಹೂಡಿಕೆದಾರ

ಒಳ ವಹಿವಾಟು ಪ್ರಕರಣ: 27.6 ಕೋಟಿ ಡಾಲರ್ ಅವ್ಯವಹಾರ ಶಂಕೆ
Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): `ಅತ್ಯಂತ ಲಾಭದಾಯಕ'ವಾದ ಒಳ ವಹಿವಾಟು ನಡೆಸಿದ ಪ್ರಕರಣವೊಂದರಲ್ಲಿ ಭಾರತೀಯ ಮೂಲದ ಆಪದ್ಧನ ಹೂಡಿಕೆದಾರರೊಬ್ಬರು ಆರೋಪಿಯಾಗಿದ್ದಾರೆ.

27.6 ಕೋಟಿ ಡಾಲರ್‌ಗಳ ಅವ್ಯವಹಾರ ಇದಾಗಿದ್ದು,ಆರೋಪಿಯಾದ ಮ್ಯಾಥ್ಯೂ ಮಾರ್ಟೊಮಾನನ್ನು ಈ ಸಂಬಂಧ ಕಳೆದ ತಿಂಗಳು ಫ್ಲಾರಿಡಾದ ಬೊಕಾ ರೇಟನ್‌ನ ನಿವಾಸದಲ್ಲಿ ಬಂಧಿಸಲಾಗಿತ್ತು.

ಮಿದುಳು ನಿಷ್ಕ್ರಿಯತೆಗೆ ಕಾರಣವಾಗುವ ಅಲ್‌ಝೀಮರ್ ರೋಗದ ಪ್ರಾಯೋಗಿಕ ಚಿಕಿತ್ಸೆ ಕುರಿತು ವೈದ್ಯರೊಬ್ಬರಿಂದ ಪಡೆದ ಮಾಹಿತಿಯನ್ನು ಲಾಭಕ್ಕೆ ಬಳಸಿದ ಆಪಾದನೆ 38 ವರ್ಷದ ಮ್ಯಾಥ್ಯೂ ಮೇಲಿದೆ. ಗೋಪ್ಯ ಮಾಹಿತಿಯನ್ನು ಲಾಭಕ್ಕಾಗಿ ಬಳಸಿಕೊಂಡ ಆರೋಪವೂ ಆತನ ಮೇಲೆ ಮೇಲಿದೆ.

ಬಂಧನದ ನಂತರ ಮ್ಯಾಥ್ಯೂನನ್ನು ಮ್ಯಾನ್‌ಹಟನ್ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು 50 ಲಕ್ಷ ಡಾಲರ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಿದೆ. ಮುಂದಿನ ತಿಂಗಳಿನಿಂದ ನ್ಯಾಯಾಲಯ ವಿಚಾರಣೆ ಆರಂಭಿಸಲಿದ್ದು, ಮ್ಯಾಥ್ಯೂ ಅಪರಾಧಿ ಎಂದು ತೀರ್ಪು ಹೊರಬಿದ್ದರೆ ಗರಿಷ್ಠ 45 ವರ್ಷ ಸೆರೆವಾಸ ಹಾಗೂ 50 ಲಕ್ಷ ಡಾಲರ್ ದಂಡ ವಿಧಿಸಬಹುದು. ಮ್ಯಾಥ್ಯೂ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT