ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಸ್ವಿಸ್‌ ಕೇಂದ್ರ ಬ್ಯಾಂಕ್‌

‘ಚಿನ್ನ’ದ ಪೆಟ್ಟು; ₨61,932 ಕೋಟಿ ನಷ್ಟ ಅಂದಾಜು
Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಜಿನೇವಾ(ಎಎಫ್‌ಪಿ): ಚಿನ್ನದ ಧಾರಣೆ 2013ರಲ್ಲಿ ತೀವ್ರ ಕುಸಿದಿದ್ದರಿಂದ ಸ್ವಿಟ್ಜರ್ಲೆಂಡ್‌ನ ಕೇಂದ್ರ ಬ್ಯಾಂಕ್‌ಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಹಿಂದೆಂದೂ ಕಾಣದಷ್ಟು ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದರಿಂದ ಈ ಬಾರಿ ಲಾಭಾಂಶ ನೀಡಲು ಸಾಧ್ಯವಿಲ್ಲ ಎಂದು ‘ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌’(ಎಸ್‌ಎನ್‌ ಬಿ) ಪ್ರಕಟಿಸಿದೆ.

ಸದ್ಯದ ಅಂದಾಜು ಪ್ರಕಾರವೇ, ‘ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌’, 2013 ರಲ್ಲಿ ಒಟ್ಟು 900 ಕೋಟಿ ಸ್ವಿಸ್ ಫ್ರಾಂಕ್ಸ್‌ಗಳಷ್ಟು (₨61,932 ಕೋಟಿ) ನಷ್ಟ ಅನುಭವಿಸುವ ನಿರೀಕ್ಷೆ ಇದೆ.

ವಾಸ್ತವವಾಗಿ, ಬ್ಯಾಂಕ್‌ನಲ್ಲಿನ ಚಿನ್ನ ಸಂಗ್ರಹದ ಮೌಲ್ಯವನ್ನು ಲೆಕ್ಕಕ್ಕೆ ತೆಗೆದು ಕೊಂಡರೆ 1500 ಕೋಟಿ ಸ್ವಿಸ್‌ ಫ್ರಾಂಕ್‌ಗಳವರೆಗೂ (₨130220.48 ಕೋಟಿ) ನಷ್ಟದ ಪ್ರಮಾಣ ಹಿಗ್ಗುತ್ತದೆ. ಏಕೆಂದರೆ, 2013ರಲ್ಲಿ ಸ್ವಿಟ್ಜರ್ಲೆಂಡ್‌ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯಲ್ಲಿ ಶೇ 28ರಷ್ಟು ಕುಸಿತವಾಗಿದೆ.

ಆದರೆ, ಬ್ಯಾಂಕ್‌ ಬಳಿ ಇರುವ 300 ಕೋಟಿ ಸ್ವಿಸ್‌ ಫ್ರಾಂಕ್‌ ಮೌಲ್ಯದ ವಿದೇಶಿ ಕರೆನ್ಸಿಗಳಿಂದ ಹಾಗೂ 2008 ರಲ್ಲಿ ಬಿಡುಗಡೆ ಮಾಡಿದ ಸುಸ್ಥಿರ ನಿಧಿ ಯೋಜನೆಯ ಬಾಂಡ್‌ಗಳ ಮೌಲ್ಯ 300 ಕೋಟಿ ಸ್ವಿಸ್‌ ಫ್ರಾಂಕ್‌ಗಳಷ್ಟು ಹೆಚ್ಚಿರುವುದರಿಂದಾಗಿ ನಷ್ಟದ ಬಾಬ್ತು (600 ಕೋಟಿ ಸ್ವಿಸ್‌ ಫ್ರಾಂಕ್‌) ಕಡಿಮೆ ಆಗಿದೆ. ಅಷ್ಟೇ ಅಲ್ಲ, ಸಂಪೂರ್ಣ ದಿವಾಳಿಗೆ ಹೊರಳುವ ಅಪಾಯದಿಂದಲೂ ಬ್ಯಾಂಕನ್ನು ಈ ಎರಡೂ ಅಂಶಗಳು ರಕ್ಷಿಸಿವೆ ಎಂದೇ ವಿಶ್ಲೇಷಿಸಲಾಗಿದೆ.

ಇದೆಲ್ಲದರ ಮಧ್ಯೆಯೂ ‘ಎಸ್‌ಎನ್‌ ಬಿ’ 300 ಕೋಟಿ ಸ್ವಿಸ್‌ ಫ್ರಾಂಕ್‌ಗಳನ್ನು ಇತರೆ ದೇಶಗಳೊಂದಿಗಿನ ವಹಿವಾಟಿ ಗಾಗಿ ವಿದೇಶಿ ನಗದು ವಿನಿಮಯ ಲೆಕ್ಕ ದಲ್ಲಿ ಮೀಸಲಿರಿಸಬೇಕಿದೆ. ಹಾಗಾಗಿ 2013ರ ಕೊನೆಗೆ ಸ್ವಿಟ್ಜರ್ಲೆಂಡ್‌ನ ಕೇಂದ್ರ ಬ್ಯಾಂಕ್‌ ಒಟ್ಟಾರೆ 1200 ಕೋಟಿ ಸ್ವಿಸ್‌ ಫ್ರಾಂಕ್‌ (₨82,485 ಕೋಟಿ) ನಷ್ಟದಲ್ಲಿ ಸಿಲುಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT