ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಹರಿಯಾಣ-ರಾಜಸ್ತಾನ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ರೋಹತಕ್ (ಪಿಟಿಐ): ಬನ್ಸಿಲಾಲ್ ಕ್ರೀಡಾಂಗಣದಲ್ಲಿ ಹರಿಯಾಣ ಹಾಗೂ ಕಳೆದ ಸಲದ ಚಾಂಪಿಯನ್ ರಾಜಸ್ತಾನ ತಂಡದ ಬೌಲರ್‌ಗಳ ಮೆರೆದಾಟ. ಈ ಪರಿಣಾಮ ರಣಜಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಮೊದಲ ದಿನವೇ 18 ವಿಕೆಟ್ ಪತನ. ಎರಡೂ ತಂಡಗಳಿಂದ ಹರಿದು ಬಂದಿದ್ದು ಕೇವಲ 171 ರನ್.
ಏಟಿಗೆ ಎದುರೇಟು. ದಾಳಿಗೆ ಪ್ರತಿ ದಾಳಿ ನಡೆಸಿದ ಉಭಯ ತಂಡಗಳು ಆರಂಭದ ದಿನದಲ್ಲಿ ಮೂರಂಕಿಯ ಮೊತ್ತವನ್ನು ಸಹ ಮುಟ್ಟಲಿಲ್ಲ.

ಪಿಚ್ `ಮರ್ಮ~ ಅರಿತ ಹರಿಯಾಣ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ತಾನ 36.1 ಓವರ್‌ಗಳಲ್ಲಿ 89 ರನ್ ಗಳಿಸಿ ಆಲ್ ಔಟ್ ಆಯಿತು. ಇದಕ್ಕೆ ಆತಿಥೇಯ ತಂಡದ ಹರ್ಷಲ್ ಪಟೇಲ್ (34ಕ್ಕೆ8) ಪ್ರಭಾವಿ ಬೌಲಿಂಗ್ ಕಾರಣ. ವಿನಿತ್ ಸೆಕ್ಸೆನಾ (32, 86ಎಸೆತ, 2ಬೌಂಡರಿ) ಪ್ರವಾಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 41ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 82 ರನ್ ಗಳಿಸಿದೆ.

ಮುಂಬೈ ವರದಿ: ತಮಿಳುನಾಡು ತಂಡ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಮುಂಬೈ ವಿರುದ್ಧದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಮೊದಲ ದಿನ ಗೌರವದ ಮೊತ್ತ ಕಲೆ ಹಾಕಿದೆ.

ಸ್ಕೋರು:  ರಾಜಸ್ತಾನ: 36.1 ಓವರ್‌ಗಳಲ್ಲಿ 89. (ವಿನಿತ್ ಸಕ್ಸೆನಾ 32,  ಜಗಿಂದರ್ ಸಿಂಗ್ 16; ಹರ್ಷಲ್ ಪಟೇಲ್ 34ಕ್ಕೆ8). ಹರಿಯಾಣ: 41 ಓವರ್‌ಗಳಲ್ಲಿ 8 ವಿಕೆಟ್‌ಗೆ 82. (ಜಯಂತ್ ಯಾದವ್ 23, ಮೋಹಿತ್ ಶರ್ಮ ಬ್ಯಾಟಿಂಗ್ 16; ಪಂಕಜ್ ಸಿಂಗ್ 21ಕ್ಕೆ2, ರಿತುರಾಜ್ ಸಿಂಗ್ 36ಕ್ಕೆ5).

ತಮಿಳುನಾಡು 90 ಓವರ್‌ಗಳಲ್ಲಿ 6 ವಿಕೆಟ್‌ಗೆ 250. (ಎಂ.ವಿಜಯ್ 47, ಬದರೀನಾಥ್ 56, ಆರ್. ಪ್ರಸನ್ನ ಬ್ಯಾಟಿಂಗ್ 81; ಧವಳ್ ಕುಲಕರ್ಣಿ 60ಕ್ಕೆ2, ಬಲ್ವಿಂದರ್ ಸಂಧು 80ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT