ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೆ ರಂಗೋಲಿಯ ಮೆರಗು!

Last Updated 15 ಜನವರಿ 2012, 8:55 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಇತಿಹಾಸ ಪ್ರಸಿದ್ದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಬಿಡಿಸಿರುವ ಬಣ್ಣ ಬಣ್ಣದ ರಂಗೋಲಿಗಳು ಗಮನ ಸೆಳೆಯುತ್ತಿವೆ.

ಪಟ್ಟಣದ ನಾಗರತ್ನ ಬಾಯಿ ಕುಟುಂಬದವರು ಕಳೆದ 20 ವರ್ಷಗಳಿಂದ ಚಿತ್ತಾಕರ್ಷಕ ರಂಗೋಲಿ ಬಿಡಿಸುತ್ತಿದ್ದು, ಈ ಬಾರಿ ಕೂಡ ಹತ್ತಾರು ರಂಗೋಲಿಗಳನ್ನು ಬಿಡಿಸಿದ್ದಾರೆ. ಬಾಲ ಗಣಪತಿ, ಶ್ರೀಲಕ್ಷ್ಮಿ, ನಾಗಮಂಡಲ, ನರಸಿಂಹಸ್ವಾಮಿ ಯವರ ಪಾದುಕೆಗಳು, ವೀರ ಹನು ಮಂತನ ಚಿತ್ರಗಳು ಮನಮೋಹಕ ವಾಗಿವೆ, ರಂಗೋಲಿಯಲ್ಲಿ ಮೂಡಿರುವ ವೆಂಕಟೇಶ್ವರ, ಶಂಕ, ಚಕ್ರಗಳು ಗಮನ ಸೆಳೆಯುತ್ತಿವೆ.

ದೇಗುಲದ ಗರ್ಭಗುಡಿಯ ಎಡ ಭಾಗ ಮತ್ತು ಮುಖ ನೇರದಲ್ಲಿ ಈ ರಂಗೋಲಿಗಳನ್ನು ಬಿಡಿಸಲಾಗಿದೆ. ಇಟ್ಟಿಗೆ ಪುಡಿಯ ಹಿನ್ನೆಲೆಯ ಮೇಲೆ ಕೆಂಪು, ಹಳದಿ, ಹಸಿರು, ನೀಲಿ ಬಣ್ಣಗಳನ್ನು ಬಳಸಿ ರಂಗೋಲಿಯಲ್ಲಿ ದೇವರ ಚಿತ್ರ ಮೂಡಿಸಲಾಗಿದೆ.

ಕಳೆದ ಮೂರು ದಿನಗಳಿಂದ ನಾಗರತ್ನ ಬಾಯಿ ಮತ್ತು ಅವರ ಪುತ್ರಿ ಯರಾದ ಮೀನಾಕ್ಷಿಬಾಯಿ ಹಾಗೂ ರಾಜೇಶ್ವರಿಬಾಯಿ ರಂಗೋಲಿ ಬಿಡಿಸು ತ್ತಿದ್ದು ಭಾನುವಾರ ಬೆಳಿಗ್ಗೆ ಪೂರ್ಣ ಗೊಳ್ಳಲಿದೆ. ಶ್ರೀರಂಗನಾಥನ ಲಕ್ಷ ದೀಪೋತ್ಸವಕ್ಕೆ ಬರುವ ಜನರು ಈ ರಂಗೋಲಿಗಳನ್ನು ವೀಕ್ಷಿಸಲು ಅವಕಾಶ ಇರುತ್ತದೆ ಎಂದು ನಾಗರತ್ನಬಾಯಿ ಹೇಳುತ್ತಾರೆ.

ದನಗಳ ಜಾತ್ರೆ ಇಂದಿನಿಂದ: ತಾಲ್ಲೂಕಿನ ಕೆಆರ್‌ಎಸ್‌ನ ಉಪ್ಪರಿಕೆ ಬಸವೇಶ್ವರ ಸ್ವಾಮಿ ದನಗಳ ಜಾತ್ರೆ ಭಾನುವಾರ ಸಂಜೆ ಶುರುವಾಗಲಿದೆ. ಕೆಆರ್‌ಎಸ್‌ನ ಬಸವೇಶ್ವರ ದೇವಾಲ ಯದ ಆವರಣದಲ್ಲಿ, ಕೆಆರ್‌ಎಸ್ ಹಿನ್ನೀರಿನಲ್ಲಿ ಈ ಜಾತ್ರೆ ನಡೆಯಲಿದ್ದು, ಒಂದು ವಾರ ಕಾಲ ಜಾತ್ರೆ ಇರುತ್ತದೆ. ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಸು ಮಾರಾಟ ಮಾಡುವವರು ಹಾಗೂ ಕೊಳ್ಳುವ ವರಿಗೆ ಉಳಿದುಕೊಳ್ಳಲು ಸೂಕ್ತ ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT