ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅದೇ ಹುದ್ದೆ ಕೇಳುವಂತಿಲ್ಲ: ಸುಪ್ರೀಂ
ನವದೆಹಲಿ (ಪಿಟಿಐ):
ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾ­ಗೊಂಡ ಉದ್ಯೋಗಿ ಕ್ರಿಮಿನಲ್‌ ನ್ಯಾಯಾಲಯದಿಂದ ದೋಷ ಮುಕ್ತಗೊಂಡರೂ ಪುನಃ ಅದೇ ಹುದ್ದೆ ಬೇಕು ಎಂದು ‘ಹಕ್ಕು’ ಸಾಧಿಸುವಂತಿಲ್ಲ ಎಂದು ಎಂದು ‘ಸುಪ್ರೀಂ’ಕೋರ್ಟ್‌ ಹೇಳಿದೆ. ‘ಉದ್ಯೋಗಿ ಕ್ರಿಮಿನಲ್‌ ನ್ಯಾಯಾ­ಲ­ದಿಂದ  ದೋಷಮುಕ್ತಗೊಂಡರೆ ಉದ್ಯೋಗಿಗೆ ತನ್ನಿಂತಾನೆ ಆ ಹುದ್ದೆ ಸಿಗುತ್ತದೆ ಎನ್ನುವ ಬಗ್ಗೆ ಯಾವುದೇ ನಿಯಮ ಇಲ್ಲ’ ಎಂದು ಎಂದು ನ್ಯಾಯಮೂರ್ತಿ ಕೆ.ಎಸ್‌.­ರಾಧಾಕೃಷ್ಣನ್‌ ಮತ್ತು ಎ.ಕೆ.ಸಿಕ್ರಿ ಅವರ­ನ್ನೊಳಗೊಂಡ ಪೀಠ ಹೇಳಿದೆ.

ಅಮ್ರೋಹಿ ಆಸ್ತಿ ಮಾರಾಟಕ್ಕೆ ತಡೆ
ಮುಂಬೈ (ಪಿಟಿಐ):
ಚಿತ್ರ ನಿರ್ಮಾಪಕ ದಿವಂಗತ ಕಮಲ್‌ ಅಮ್ರೋಹಿ ಅವರ ಹಿರಿಯ ಪುತ್ರ ಶಾಂದಾರ್ ಅಮ್ರೋಹಿ ಅವರ ಆಸ್ತಿಯನ್ನು ಮಾರಾಟ­ ಮಾಡು­ವುದಕ್ಕೆ ಮತ್ತು ಮೂರನೇ ವ್ಯಕ್ತಿಗೆ ಆಸ್ತಿ ಹಕ್ಕುಗಳನ್ನು ನೀಡುವುದಕ್ಕೆ ಬಾಂಬೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.
2011ರ ಆಗಸ್ಟ್‌ನಲ್ಲಿ ನಿಧನರಾಗಿದ್ದ ಶಾಂದಾರ್‌ ಅಮ್ರೋಹಿ ಅವರಿಗೆ ನೀಡಿದ್ದ ₨2 ಕೋಟಿ ಸಾಲ ಹಾಗೂ  ₨80 ಲಕ್ಷ ಬಡ್ಡಿ ಮೊತ್ತವನ್ನು ವಾಪಸ್‌ ಕೊಡಿಸ­ಬೇಕು ಎಂದು ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಹೈಕೋರ್ಟ್‌ಗೆ  ಕಳೆದ ತಿಂಗಳು ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯ­ಮೂರ್ತಿ ಎಸ್‌.ಕೆ. ಕಥವಾಲಾ ಅವರು, ಜನವರಿ 6ರೊಳಗೆ ಪ್ರಮಾಣ ಪತ್ರ­ಗಳನ್ನು ಸಲ್ಲಿಸುವಂತೆ ಶಾಂದಾರ್‌ ಅಮ್ರೋಹಿ ಅವರ ಆಸ್ತಿಯ ವಾರಸು­ದಾರರು ಮತ್ತು ಪತ್ನಿ ಶಾಹಿದಾ ಅಮ್ರೋಹಿ ಅವರಿಗೆ ನಿರ್ದೇಶಿಸಿದರು. ಜೊತೆಗೆ, ಶಾಂದಾರ್‌ ಅಮ್ರೋಹಿ ಹೆಸ­ರಿನಲ್ಲಿರುವ ಬ್ಯಾಂಕ್ ಖಾತೆಗಳ ವಿವರ ನೀಡು­ವಂತೆಯೂ ಸೂಚಿಸಿದರು. ಪ್ರಕರಣದ ವಿಚಾರಣೆಯನ್ನು ಜನ­ವರಿ 20ಕ್ಕೆ ಮುಂದೂಡಲಾಗಿದೆ.

ಗಂಗೂಲಿ ರಾಜೀನಾಮೆಗೆ ಆಗ್ರಹ
ಕೋಲ್ಕತ್ತ (ಪಿಟಿಐ):
ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರು­ಕುಳ ನೀಡಿರುವ ಆರೋಪ ಹೊತ್ತಿರುವ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎ.ಕೆ. ಗಂಗೂಲಿ ಅವರು ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ (ಡಬ್ಲ್ಯುಬಿಎಚ್‌ಆರ್‌ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ­ಬೇಕು ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಆಗ್ರಹಿಸಿದೆ.

ಪಾರಾದೀಪ್‌ ಬಂದರು ಜಟ್ಟಿ ಕುಸಿತ
ಕೇಂದ್ರಪಾರ, ಒಡಿಶಾ (ಪಿಟಿಐ):
‘ಫೈಲಿನ್‌’ ಚಂಡಮಾರುತ ಅಪ್ಪಳಿಸಿದ ಒಂದು ವಾರಗಳ ನಂತರ ರಾಜ್ಯದ ಅತಿ­ದೊಡ್ಡ ಪಾರಾದೀಪ್‌ ಮೀನು­­ಗಾರಿಕಾ ಬಂದರಿನ  ಜಟ್ಟಿ ಕುಸಿದಿದೆ. ಸುಮಾರು 45 ಮೀಟರ್‌ ಉದ್ದದ ಜಟ್ಟಿ ಕುಸಿದಿದ್ದು, ‘ಪ್ರಾಥಮಿಕ ಮಾಹಿತಿಯ ಪ್ರಕಾರ ₨ 10 ಕೋಟಿ ನಷ್ಟ ಆಗಿದೆ’ ಎಂದು ಪಾರಾದಿಪ್‌ ಬಂದರು ಅಧಿಕಾರಿ ರಂಜಿತ್‌ ಕಿಶೋರ್‌ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT