ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ನ್ಯೂಸ್ ವೀಕ್~ ಮುದ್ರಣ ಸ್ಥಗಿತ
ನ್ಯೂಯಾರ್ಕ್ (ಪಿಟಿಐ): ಸುಮಾರು 80 ವರ್ಷ ಇತಿಹಾಸ ಹೊಂದಿರುವ ಅವೆುರಿಕದ `ನ್ಯೂಸ್ ವೀಕ್~ ನಿಯತಕಾಲಿಕೆಯ ಮುದ್ರಣ ಆವೃತ್ತಿಯು ಈ ವರ್ಷದ ಅಂತ್ಯಕ್ಕೆ ಸ್ಥಗಿತಗೊಳ್ಳಲಿದೆ.

ಡಿ. 31ರ ಆವೃತ್ತಿಯೇ ಕೊನೆಯದಾಗಲಿದೆ.ಮುಂದಿನ ವರ್ಷದಿಂದ ಸಂಪೂರ್ಣ ಇಂಟರ್‌ನೆಟ್ ಆವೃತ್ತಿ ಆರಂಭಿಸಲು ಸಂಸ್ಥೆ ಮುಂದಾಗಿದ್ದು, ಇದರಿಂದಾಗಿ ಇಲ್ಲಿ ದುಡಿಯುತ್ತಿರುವ ಹಲವು ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಶಂಕಿತನ ಬಳಿ ವಿದ್ಯಾರ್ಥಿ ವೀಸಾ
ವಾಷಿಂಗ್ಟನ್ (ಪಿಟಿಐ): ಸ್ಫೋಟ ಸಂಚಿಗೆ ಸಂಬಂಧಪಟ್ಟಂತೆ ನ್ಯೂಯಾರ್ಕ್‌ನಲ್ಲಿ ಬಂಧನಕ್ಕೊಳಗಾಗಿರುವ ಬಾಂಗ್ಲಾ ಪ್ರಜೆ, ಶಂಕಿತ ಅಲ್‌ಖೈದಾ ಉಗ್ರ ಕ್ವಾಜಿ ಮೊಹಮದ್ ರಿಜ್ವಾನುಲ್ ಎಹಸಾನ್ ನಫೀಸ್ ಅಮೆರಿಕದಲ್ಲಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದ್ಯಾರ್ಥಿ ವೀಸಾ ಪಡೆದಿದ್ದ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಶಕ್ತಶಾಲಿ ಬಾಂಬ್ ಬಳಸಿ ನಗರದ ಫೆಡರಲ್ ರಿಸರ್ವ್ ಕಟ್ಟಡವನ್ನು ಸ್ಫೋಟಿಸಲು ಈತ ನಡೆಸಿದ್ದ ಸಂಚನ್ನು ಎಫ್‌ಬಿಐ ವಿಫಲಗೊಳಿಸಿತ್ತು.

ಬಡತನ ನಿರ್ಮೂಲನೆ: ಪಾಕ್ ವಿಫಲ
ಇಸ್ಲಾಮಾಬಾದ್ (ಐಎಎನ್‌ಎಸ್): `ಬಡತನ ನಿರ್ಮೂಲನೆ ಕಾರ್ಯಕ್ರಮವನ್ನು ಸಕ್ರಿಯವಾಗಿ ಜಾರಿಗೆ ತರುವಲ್ಲಿ ಪಾಕಿಸ್ತಾನ ವಿಫಲಗೊಂಡ ಪರಿಣಾಮ ಅಲ್ಲಿನ ಸುಮಾರು ಮೂರನೇ ಒಂದರಷ್ಟು ಜನರು ರಾತ್ರಿಯಲ್ಲಿ  ಹಸಿದ ಹೊಟ್ಟೆಯಲ್ಲಿಯೇ ಮಲಗುತ್ತಿದ್ದಾರೆ~ ಎಂದು `ದಿ ಡಾನ್ ಪತ್ರಿಕೆ~ಯ ಸಂಪಾದಕೀಯದಲ್ಲಿ ಹೇಳಲಾಗಿದೆ.

`ಕೃಷಿ ಆಧಾರಿತ ಆರ್ಥಿಕತೆ ಹೊಂದಿರುವ ಪಾಕಿಸ್ತಾನದಲ್ಲಿ ಜನರ ಮುಖ್ಯ ಉದ್ಯೋಗ ಕೃಷಿಯಾಗಿದ್ದು ಜೀವನ ನಿರ್ವಹಣೆಗೆ ಅಗತ್ಯವಾದಷ್ಟು ಆಹಾರ ಇದರಿಂದ ದೊರೆಯುತ್ತಿತ್ತು. ಆದರೆ ಈಗ ಆಹಾರದ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಬಡವರ ಸಂಕಷ್ಟ ಊಹೆಗೂ ನಿಲುಕದಂತಾಗಿದೆ~ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT