ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ನ್ಯೂಸ್‌ವೀಕ್' ಇನ್ನು `ನ್ಯೂಸ್‌ಬೀಸ್ಟ್'
ವಾಷಿಂಗ್ಟನ್ (ಎಎಫ್‌ಪಿ):
  ಮುದ್ರಣ ಕ್ಷೇತ್ರದಲ್ಲಿ 80 ವರ್ಷ ಪೂರೈಸಿರುವ ಇಲ್ಲಿನ `ನ್ಯೂಸ್‌ವೀಕ್' ಸುದ್ದಿ ನಿಯತಕಾಲಿಕವು `ನ್ಯೂಸ್‌ಬೀಸ್ಟ್' ಎಂಬ ಮರುನಾಮಕರಣದೊಂದಿಗೆ ಇನ್ನು ಹೊರಬರಲಿದೆ.

2010ರಲ್ಲಿ `ನ್ಯೂಸ್‌ವೀಕ್' ಮತ್ತು `ದಿ ಡೈಲಿ ಬೀಸ್ಟ್' ಪತ್ರಿಕೆಗಳು ವಿಲೀನಗೊಂಡವು. ಕಳೆದ ವರ್ಷ ಡಿಜಿಟಲ್ ಮುದ್ರಣವನ್ನು ಆರಂಭಿಸಿದವು. ಪತ್ರಿಕೆಯ ವೆಬ್‌ಸೈಟ್ ಎರಡೂ ಹೆಸರುಗಳಲ್ಲಿ ಪ್ರಕಟಗೊಳ್ಳಲಿದೆ.

ದಿ ನ್ಯೂಸ್‌ವೀಕ್ ಡೈಲಿ ಬೀಸ್ಟ್ ಕಂಪೆನಿಯ ಸಿಬ್ಬಂದಿ ಸಭೆಯಲ್ಲಿ ನ್ಯೂಸ್‌ವೀಕ್ ಸಂಪಾದಕಿ ಟೀನಾ ಬ್ರೌನ್ ಮತ್ತು ಘಟಕದ ಮುಖ್ಯ ಕಾರ್ಯನಿರ್ವಾಹಕ ಬಾಬಾ ಶೆಟ್ಟಿ ಈ ವಿಷಯವನ್ನು ಪ್ರಕಟಿಸಿದರು.

ಪೆಸಿಫಿಕ್ ಸಾಗರದಲ್ಲಿ ಭೂಕಂಪನ
ಸಿಡ್ನಿ (ಎಎಫ್‌ಪಿ):
ಪೆಸಿಫಿಕ್ ಸಾಗರದ ಭಾಗವಾದ ಸಾಲೋಮನ್ ದ್ವೀಪದ ಬಳಿ ಸಮುದ್ರದಾಳದಲ್ಲಿ ಶನಿವಾರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 6.6ರಷ್ಟು ದಾಖಲಾಗಿದೆ ಎಂದು ಆಸ್ಟ್ರೇಲಿಯಾ ಭೂಕಂಪನ ಶಾಸ್ಟ್ರಜ್ಞರು ತಿಳಿಸಿದ್ದಾರೆ.

ಅಮೆರಿಕ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ಭೂಕಂಪನವು 6.3ರಷ್ಟು ಪ್ರಮಾಣದಲ್ಲಿದ್ದು, 19 ಕಿ.ಮೀ. ಸಮುದ್ರದಾಳದಲ್ಲಿ ಸಂಭವಿಸಿದೆ ಎಂದು ತಿಳಿಸಿದೆ. ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಮುಂಜಾಗ್ರತಾ ಕೇಂದ್ರ ಸಹ ಸುನಾಮಿ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಹೇಳಿದೆ. ಕಳೆದ ಮೂರು ದಿನಗಳಲ್ಲಿ ನಾಲ್ಕು ಬಾರಿ ಇದೇ ಸ್ಥಳದಲ್ಲಿ ಭೂಕಂಪನ ಸಂಭವಿಸಿದೆ.

ತೈಪೆ ವರದಿ: ಪೂರ್ವ ತೈವಾನ್‌ನಲ್ಲಿ ಶನಿವಾರ 5.5ರಷ್ಟು ಪ್ರಮಾಣದ ಭೂಕಂಪನ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ. ಭೂಕಂಪನವು 16.9 ಕಿ.ಮೀ. ಸಮುದ್ರದಾಳದಲ್ಲಿ ಸಂಭವಿಸಿದೆ ಎಂದು ಪೆಸಿಫಿಕ್ ಭೂಕಂಪನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಆತ್ಮಾಹುತಿ ದಾಳಿ: 30 ಸಾವು
ಇಸ್ಲಾಮಾಬಾದ್ (ಪಿಟಿಐ):
ತಾಲಿಬಾನ್ ಉಗ್ರರು ಇಲ್ಲಿನ ಭದ್ರತಾ ಪಡೆ ತಪಾಸಣಾ ಕೇಂದ್ರದ ಬಳಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಆರು ಸೈನಿಕರು ಸೇರಿದಂತೆ 30 ಜನರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ತೆರಿಗೆ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ
ಲಂಡನ್ (ಪಿಟಿಐ):
ಮಾಹಿತಿ ವಿನಿಮಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಭಾರತ ಹಾಗೂ ಜಿಬ್ರಾಲ್ಟರ್ ತೆರಿಗೆ ಮಾಹಿತಿ ವಿನಿಮಯ ಒಪ್ಪಂದಕ್ಕೆ (ಟಿಐಇಎ) ಶನಿವಾರ ಸಹಿ ಹಾಕಿವೆ.

ಭಾರತೀಯ ಹೈಕಮಿಷನರ್ ಜೈಮಿನಿ ಭಗವತಿ ಹಾಗೂ ಲಂಡನ್‌ನ ಹಣಕಾಸು ಸೇವೆಗಳ ಸಚಿವ ಗಿಲ್ಬರ್ಟ್ ಲೈಸುಡಿ ಅವರ ಸಮಕ್ಷಮದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಟಿಐಇಎಗೆ ಸಂಬಂಧಿಸಿದಂತೆ ಭಾರತದ 13ನೇ ಒಪ್ಪಂದ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT