ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಹೆಚ್ಚು ನಿದ್ದೆ ಒಳ್ಳೆಯದೇ!
ವಾಷಿಂಗ್ಟನ್ (ಪಿಟಿಐ):
ರಾತ್ರಿಯ  ನಿದ್ದೆ ಅವಧಿಯನ್ನು ವಿಸ್ತರಿಸುವುದರಿಂದ ಹಗಲು ಹೊತ್ತಿನಲ್ಲಿ ಹೆಚ್ಚು ಜಾಗರೂಕರಾಗಿರಬಹುದು ಎಂದು ಅಧ್ಯಯನವೊಂದು ಹೇಳಿದೆ.

ನಿದ್ದೆಯ ಅವಧಿ ವಿಸ್ತರಣೆಯು ಒಬ್ಬ ವ್ಯಕ್ತಿಯ ನೋವಿನ ಸಂವೇದನೆಯನ್ನು ಕುಗ್ಗಿಸುತ್ತದೆ ಎಂದೂ ಅದು ಹೇಳಿದೆ.
ಈ ಅಧ್ಯಯನದಲ್ಲಿ ತಜ್ಞರು, ಆರೋಗ್ಯವಂತ, ನೋವಿನಿಂದ ಮುಕ್ತರಾದ, ಹೆಚ್ಚು ನಿದ್ದೆ ಮಾಡುವ  18 ಸ್ವಯಂಸೇವಕರನ್ನು ಪರೀಕ್ಷಿಸಿದ್ದಾರೆ. ಅಧ್ಯಯನದ ವಿವರಗಳು `ಸ್ಲೀಪ್' ಜರ್ನಲ್‌ನಲ್ಲಿ ಪ್ರಕಟವಾಗಿದೆ.

ತರಗತಿಗೆ ಬಂದೂಕು ತಂದ ಶಿಕ್ಷಕ!
ಬೀಜಿಂಗ್ (ಐಎಎನ್‌ಎಸ್):
ಚೀನಾ ವಿಶ್ವವಿದ್ಯಾಲಯದ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ನಿಜವಾದ ಶಸ್ತ್ರಾಸ್ತ್ರಗಳನ್ನು ತೋರಿಸಿ ಪಾಠ ಮಾಡಿದ ಛಾಯಾಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ನಂಜಿಂಗ್ ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಶಿಕ್ಷಕ ವೂ ಎಂಬುವವರು ಶಸ್ತ್ರಾಸ್ತ್ರಗಳ ರಚನೆ ಬಗ್ಗೆ ಪಾಠ ಮಾಡುವಾಗ ನ. 28ರಂದು ಎಕೆ-47 ಬಂದೂಕು ಸೇರಿ ಸುಮಾರು 30 ಬಗೆಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ್ದರು. ಈ ದೃಶ್ಯವನ್ನು ಸೆರೆ ಹಿಡಿದು ಅಂತರ್ಜಾಲದಲ್ಲಿ ಹರಿಬಿಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿದ್ಯಾರ್ಥಿಗಳಿಗೆ ತರಗತಿಯಿಂದ ಹೊರಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದೆ.  ಶಿಕ್ಷಕನ ಮೇಲುಸ್ತುವಾರಿಯಲ್ಲೇ ಅವುಗಳನ್ನು ಕೈಯಲ್ಲಿ ಹಿಡಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತ- ಚೀನಾ ಸಂಬಂಧಕ್ಕೆ ಧಕ್ಕೆ ಇಲ್ಲ:  ಡೈ ಸ್ಪಷ್ಟನೆ
ಬೀಜಿಂಗ್ (ಪಿಟಿಐ):
  ಗಡಿ ವಿವಾದವಿದ್ದರೂ  ಭಾರತ ಮತ್ತು ಚೀನಾ ಮಧ್ಯೆ ಏರ್ಪಟ್ಟಿರುವ ಉತ್ತಮ ಬಾಂಧವ್ಯವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

ಚೀನಾದಲ್ಲಿ ಮುಖಂಡತ್ವ ಬದಲಾದರೂ ಭಾರತದ ಸಂಬಂಧದ ಬಗ್ಗೆ ಇರುವ ಧೋರಣೆಯಲ್ಲಿ ಬದಲಾವಣೆಯಾಗಿಲ್ಲ. ಂಬಂಧ ಇನ್ನಷ್ಟು ಗಾಢವಾಗಲಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ರಾಜತಾಂತ್ರಿಕ ಅಧಿಕಾರಿ ಡೈ ಬಿಂಗೊ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರಿಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT