ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶಿ ಸುದ್ದಿಗಳು

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಬರ್ಫಿ~ಗೆ ಅಭಿನಂದನೆ
ಲಂಡನ್ (ಪಿಟಿಐ):
ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಪ್ರವೇಶ ಪಡೆದಿರುವ `ಬರ್ಫಿ~ ಚಿತ್ರವನ್ನು  ಗುರುವಾರ ಬೂಸಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (ಬಿಐಎಫ್‌ಎಫ್) ಪ್ರದರ್ಶಿಸಿದಾಗ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಜನರು ಎದ್ದು ನಿಂತು ದೀರ್ಘ ಕರತಾಡನ ಮಾಡಿ ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಣಬೀರ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಉಪಸ್ಥಿತರಿದ್ದರು. ಅನುರಾಗ್ ಬಸು ಅವರು ಈ ಹಾಸ್ಯಮಯ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಗಾಂಧಿ ಪುತ್ಥಳಿ ಅನಾವರಣ
ವಾಷಿಂಗ್ಟನ್ (ಪಿಟಿಐ):
ಫ್ಲಾರಿಡಾ ನಗರದಲ್ಲಿ ಏಳು ಅಡಿ ಎತ್ತರದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪುತ್ಥಳಿಯನ್ನು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅನಾವರಣಗೊಳಿಸಿದರು.

ಪುತ್ಥಳಿ ಅನಾವರಣಗೊಳಿಸಿದ ಕಲಾಂ ಅವರಿಗೆ ಡವೈ ನಗರದ ಮೇಯರ್ ಜುಡಿ ಪೌಲ್ ಅವರು ಸಾಥ್ ನೀಡಿದರು. ಗಾಂಧೀಜಿ ಹುಟ್ಟಿದ ದಿನ, ಅಕ್ಟೋಬರ್ 2ನ್ನು `ವಿಶ್ವಶಾಂತಿ ಮತ್ತು ಮಹಾತ್ಮಗಾಂಧಿ ದಿನ~ ಎಂದು ಘೋಷಿಸಲಾಗಿದೆ.

ಈ ಸಂಬಂಧ 800 ಪೌಂಡ್ ತೂಕದ ಗಾಂಧಿ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಮಟ್ ಗ್ಲೆನ್ ಎಂಬ ಶಿಲ್ಪಿ ಈ ಪುತ್ಥಳಿಯನ್ನು ಕೆತ್ತಿದ್ದಾರೆ. ವಿಶೇಷವೆಂದರೆ, ಕಡಿಮೆ ಕೂಲಿಯಲ್ಲಿ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಶಿಲ್ಪಿಗಳೂ ಕೂಡ ಗಾಂಧಿಯವರಿಗೆ ಗೌರವ ಸಲ್ಲಿಸಿದ್ದಾರೆ.

ಭಾರತ- ಈಜಿಪ್ಟ್ ವ್ಯಾಪಾರ ವೃದ್ಧಿ
ಕೈರೊ (ಪಿಟಿಐ):
ಭಾರತ ಮತ್ತು ಈಜಿಪ್ಟ್ ನಡುವಿನ ದ್ವಿಪಕ್ಷೀಯ ವ್ಯಾಪಾರದಲ್ಲಿ ಶೇಕಡ 30ರಷ್ಟು ಏರಿಕೆ ಕಂಡುಬಂದಿದ್ದು, ಉಭಯ ದೇಶಗಳ ನಡುವೆ ಕಳೆದ ಹಣಕಾಸು ವರ್ಷದಲ್ಲಿ ಒಟ್ಟಾರೆ ವಹಿವಾಟು 3.2 ಶತಕೋಟಿ ಡಾಲರ್‌ನಿಂದ ಪ್ರಸಕ್ತ ವರ್ಷ 4.2 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.

ಈಜಿಪ್ಟ್ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ಪ್ರಸಕ್ತ ಹಣಕಾಸು ವರ್ಷದ ಅಂಕಿಅಂಶಗಳು ಈ ವಿಷಯವನ್ನು ಬಹಿರಂಗ ಪಡಿಸಿವೆ. ಉಭಯ ದೇಶಗಳ ಮಧ್ಯೆ ಆರೋಗ್ಯಕರ ವ್ಯಾಪಾರ ಸಂಬಂಧ ವೃದ್ಧಿಗೆ ಇತ್ತೀಚಿನ ಜಾಗತಿಕ ಆರ್ಥಿಕ ಕುಸಿತ ಯಾವುದೇ ಪರಿಣಾಮ ಬೀರಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.

ಭಾರತ ಈಜಿಪ್ಟ್‌ನೊಂದಿಗೆ ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿರುವ ವಿಶ್ವದ 7ನೇ ದೊಡ್ಡ ರಾಷ್ಟ್ರವಾಗಿದೆ. ಅಲ್ಲದೆ, ಈಜಿಪ್ಟ್ ಹೆಚ್ಚಾಗಿ ಹೊರದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT