ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ

Last Updated 1 ಆಗಸ್ಟ್ 2012, 17:50 IST
ಅಕ್ಷರ ಗಾತ್ರ

ಬಸ್ ಪಲ್ಟಿ: 23 ಸಾವು
ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 23 ಜನ ಸಾವನ್ನಪ್ಪಿ, ಇತರ 29 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚರ್ಕತ ಪ್ರದೇಶದಲ್ಲಿ ಬುಧವಾರ ನಡೆದಿದೆ.  

13 ಜನರ ಗುರುತು ಪತ್ತೆ ಇಲ್ಲ
ಹೈದರಾಬಾದ್ (ಐಎಎನ್‌ಎಸ್): ರೈಲು ದುರಂತ ಸಂಭವಿಸಿ ಎರಡು ದಿನಗಳ ನಂತರವೂ ಮೃತರ ಗುರುತು ಪತ್ತೆ ಹಚ್ಚುವ  ಕಾರ್ಯ ಮುಂದುವರೆದಿದ್ದು,  ಗುರುತು ಪತ್ತೆ ಹಚ್ಚಲಾಗದ 13 ದೇಹಗಳು ನೆಲ್ಲೂರು ಆಸ್ಪತ್ರೆಯಲ್ಲೇ ಉಳಿದಿವೆ.

ಕಟ್ಟಡದಿಂದ ಜಿಗಿದು ಸಾವು
ಹೈದರಾವಾದ್ (ಪಿಟಿಐ): ಇಲ್ಲಿನ ಕಾಚಿಬೌಲಿಯ ಇನ್ಫೋಸಿಸ್ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಎಸ್. ನೀಲಿಮಾ ಎಂಬುವವರು ಅನುಮಾನಾಸ್ಪದವಾಗಿ  ಮೃತಪಟ್ಟ ಘಟನೆ ನಡೆದಿದೆ.

ವಿದೇಶಿ ಮಹಿಳೆ ಬಂಧನ
ತ್ರಿಶ್ಶೂರ್, ಕೇರಳ (ಪಿಟಿಐ): ಲಾಟರಿಮೊತ್ತ ರೂ 200 ಕೋಟಿ ನಿಮಗೆ ದೊರೆಯಲಿದೆ ಎಂದು ಎಸ್‌ಎಂಎಸ್‌ಗಳ ಮೂಲಕ ವ್ಯಕ್ತಿಯೊಬ್ಬರಿಗೆ ತಿಳಿಸಿ ವಂಚಿಸಲು ಯತ್ನಿಸಿದ ದಕ್ಷಿಣ ಆಫ್ರಿಕಾದ ಮೇರಿ ಹಬೀಬಾ ಅಬೈಮು (37) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. 

ವಿದ್ಯುತ್ ಬಿಕ್ಕಟ್ಟು ನಿವಾರಣೆ
ನವದೆಹಲಿ (ಪಿಟಿಐ): ಸುಮಾರು 20 ಗಂಟೆಗಳಿಗೂ ಹೆಚ್ಚು ಕಾಲ ದೇಶದ ಅರ್ಧಕ್ಕಿಂತಲೂ ಹೆಚ್ಚು ಭಾಗದ್ಲ್ಲಲಿ ವಿದ್ಯುತ್ ವೈಫಲ್ಯಕ್ಕೆ ಕಾರಣವಾಗಿದ್ದ ಮೂರು ಪ್ರಮುಖ ಗ್ರಿಡ್‌ಗಳು ಇದೀಗ ವಿದ್ಯುತ್ ಸರಬರಾಜು ಮಾಡುತ್ತಿವೆ.

ಉತ್ತರ, ಪೂರ್ವ ಹಾಗೂ ಈಶಾನ್ಯ ಗ್ರಿಡ್‌ಗಳು ಸಂಪೂರ್ಣವಾಗಿ ವಿದ್ಯುತ್ ಪೂರೈಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT