ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ

Last Updated 25 ಏಪ್ರಿಲ್ 2013, 6:35 IST
ಅಕ್ಷರ ಗಾತ್ರ

ಸುಭಾಷ ರಸ್ತೆಯಲ್ಲಿ ಬೆಲ್ಲದ ಪ್ರಚಾರ
ಧಾರವಾಡ:
ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ಬುಧವಾರ ನಗರದ ವ್ಯಾಪಾರಸ್ಥರೊಂದಿಗೆ ಸಂವಾದದಲ್ಲಿ ಭಾಗಿಯಾಗಿ ಮಾರುಕಟ್ಟೆಯ ಸಮಸ್ಯೆಗಳನ್ನು ಬಗೆಹರಿಸಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಭರವಸೆ ನೀಡಿದರು.

ನಂತರ ಸುಭಾಷ ರಸ್ತೆ, ಗಾಂಧಿಚೌಕ, ಗೌಡರ ಓಣಿ, ಕುರುಬರ ಓಣಿ, ಜಮಾದಾರ ಗಲ್ಲಿ, ಮ್ಯಾದಾರ ಓಣಿ, ಜೈಭೀಮ ನಗರ, ಕಲಾಲ ಸಮಾಜ, ಮಸಾಲಗಾರ ಓಣಿ, ದರೋಗಾ ಓಣಿ, ಮದಾರಮಡ್ಡಿ, ರಾಮನಗೌಡರ ಓಣಿ, ಶೀಲವಂತರ ಓಣಿ, ಹಳೆ ತಾಲೂಕ ಕಚೇರಿ ಓಣಿ, ಪಂಚ ಕಚೇರಿ ಓಣಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚಿಸಿದರು. ಸ್ಮೃತಿ ಬೆಲ್ಲದ, ವಿಜಯಾನಂದ ಶೆಟ್ಟಿ, ಪ್ರಕಾಶ ಗೋಡಬೋಲೆ, ಸುರೇಶ ಬೇದರೆ, ಚಂದ್ರು ನೀಲಗಾರ, ಸುಖನ್‌ರಾಜ್ ಬಾಫನಾ, ಈರೇಶ ಅಂಚಟಗೆರಿ, ಹೇಮರಾಜ ಭಂಡಾರಿ, ಸುನಿಲ ಸರೂರ, ಬಸವರಾಜ ಮುತ್ತಳ್ಳಿ, ಬಲರಾಮ ಕುಸುಗಲ್, ಪೂರ್ಣಾ ಪಾಟೀಲ, ನಿರ್ಮಲಾ ಜವಳಿ, ಸುಜಾತಾ ಕಳ್ಳಿಮನಿ ಇತರರು ಭಾಗವಹಿಸಿದ್ದರು.

ಕಾಶೀಮನವರ ಕಾಂಗ್ರೆಸ್‌ಗೆ ಸೇರ್ಪಡೆ
ಕಲಘಟಗಿ:
ಪಟ್ಟಣದ ಧುರೀಣ ಬಾಬುಸಾಹೇಬ ಕಾಶೀಮನವರ  ತಮ್ಮ  ಬೆಂಬಲಿಗರೊಂದಿಗೆ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವ ಮೂಲಕ ತಮ್ಮ ಕುರಿತ ಅನೇಕ ಊಹಾಪೋಹಗಳಿಗೆ ತೆರೆ ಎಳೆದರು.

ಅವರು ಬುಧವಾರ ಸಂಜೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಸಮಾರಂಭದ ನಂತರ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಸರಕಾರವನ್ನು ರಚಿಸಲಿದ್ದು ಶಾಸಕರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ, ಅವರ ಪುತ್ರ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಮೈನುದ್ದೀನ್ ಕಾಶೀಮನವರ ಸಹ ಕಾಂಗ್ರೆಸ್ ಸೇರಿದರು.

ಶ್ರಿನಿವಾಸ ಮಾನೆ, ರಾಜ್ಯದಲ್ಲಿ ಮತದಾರರು ಬಿಜೆಪಿ ಆಡಳಿತದಿಂದ ಬೇಸತ್ತು ಕಾಂಗ್ರೆಸ್ ಸರ್ಕಾರದ  ಸ್ಥಾಪನೆಗೆ ಉತ್ಸುಕರಾಗಿದ್ದು ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ  ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು

ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಬಿ ವೈ ಪಾಟೀಲ್, ಎಸ್ ಎಂ ಚಿಕ್ಕಣ್ಣವರ, ದ್ಯಾಮಣ್ಣ ನಿಗದಿ, ಚನ್ನಯ್ಯ ಹಿರೇಮಠ, ಎನ್ ಬಿ ಕುರಿಯವರ, ಮಂಜುನಾಥ ಉಳ್ಳಾಗಡ್ಡಿ, ಅಶ್ವಿನಕುಮಾರ ಪಟ್ಟಣಶೆಟ್ಟಿ, ನಿಂಗಪ್ಪ ನೂಲ್ವಿ, ಮಾಹಾಂತೇಶ ತಹಶೀಲ್ದಾರ,  ಉಪಸ್ಥಿತರಿದ್ದರು.

ಪಿ.ಸಿ.ಸಿದ್ದನಗೌಡ್ರ ಬೆಂಬಲಿಸಲು ಮನವಿ
ಕಲಘಟಗಿ:
ಮತಕ್ಷೇತ್ರದ ಚುನಾವಣೆಯು ಅಕ್ರಮ ಸಂಪತ್ತು, ಹಾಗೂ ಪ್ರಾಮಾಣಿಕ ಸೇವೆಯ ನಡುವಿನ ಧರ್ಮಯುದ್ಧವಾಗಿದ್ದು ಈ ಚುನಾವಣೆಯಲ್ಲಿ ಮತದಾರರು ಅನುಭವದ ಹಿರಿತನವುಳ್ಳ ಪಕ್ಷದ ಅಭ್ಯರ್ಥಿ ಪಿ.ಸಿ.ಸಿದ್ದನಗೌಡ್ರ ಅವರನ್ನು ಬೆಂಬಲಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಅವರು ಪಟ್ಟಣದಲ್ಲಿ ಬುಧವಾರ ಸಾಯಂಕಾಲ ಜರುಗಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ ಪಕ್ಷದ ಅಭ್ಯರ್ಥಿ ಪಿ.ಸಿ.ಸಿದ್ಧನಗೌಡ್ರ, ಬಸವರಾಜ ಹೊರಟ್ಟಿ, ಮುಜಾಹಿದ್ ಕಾಂಟ್ರಾಕ್ಟರ್, ಗಂಗಾಧರ ಪಾಟೀಲಕುಲಕರ್ಣಿ, ಶಾಂತಪ್ಪ ಚಿಕ್ಕಣ್ಣವರ, ಹನುಮಂತಪ್ಪ ಬಂಕಾಪುರ, ಎನ್.ಎಚ್.ಕೋನರೆಡ್ಡಿ, ರಾಜಣ್ಣ ಕೊರವಿ, ಎಂ.ಎಸ್.ಅಕ್ಕಿ, ಕಮಲಾ ಹೊಂಬಳ, ಶಂಕರಗಿರಿ ಬಾವಾನವರ, ಶಂಕರಪಾಟೀಲ ಮಲ್ಲಯ್ಯ ಗೋಡಿಮನಿ,ಜಗನ್ನಾಥ ಸಿದ್ಧನಗೌಡ್ರ, ಉಳುವಪ್ಪ ಬಿದರಳ್ಳಿ, ಎಸ್.ಕೆ.ಮಲ್ಲಾಡದ, ಗೀತಾ ದೈವಜ್ಞ, ನೇತ್ರಾವತಿ ಕುರುಬರ, ಮಹಮ್ಮದ ಷರೀಪ ಬೇಫಾರಿ, ಬಸವರಾಜ ಮಟ್ಟಿ, ಎಸ್.ಎನ್.ರಾಯನಾಳ,ಗಂಗಣ್ಣ ಮೊರಬದ, ಪ್ರಕಾಶ ಧೂಪದ, ಶೀತಲ್ ಸಾಬಣ್ಣವರ, ಉಮೇಶ ಜೋಶಿ, ಪ್ರಕಾಶ ಹೂಲಿಕಟ್ಟಿ, ದಶರಥ ಗಾಮನಗಟ್ಟಿ, ಪ್ರತಿಭಾ ನಾಯಕ, ಮಂಜುಳಾ ನಾಯಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT