ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿಗಳು

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾನವ ರಹಿತ ವಿಮಾನ ಅಪಘಾತ
ನವದೆಹಲಿ (ಪಿಟಿಐ): ನೌಕಾಪಡೆಗೆ ಸೇರಿದ ಮಾನವ ರಹಿತ ವಿಮಾನ (ಯುಎವಿ) ವಿಶಾಖಪಟ್ಟಣಂ ಸಮೀಪ ಗುರುವಾರ ಅಪಘಾತಕ್ಕೆ ಈಡಾಗಿದೆ.

`ಸರ್ಚರ್ ಎಂ.ಕೆ-2 ಯುಎವಿ~ ಹೆಸರಿನ ಈ ವಿಮಾನವು ಅಭ್ಯಾಸ ಮುಗಿಸಿ ನೆಲೆಗೆ ಹಿಂತಿರುಗುತ್ತಿದ್ದ ವೇಳೆ ಬೆಟ್ಟ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಗಾವಲು, ಆಯಕಟ್ಟಿನ ನೆಲೆಗಳ ಪತ್ತೆ, ಹಾನಿ ಅಂದಾಜು, ಕಾರ್ಯಾಚರಣೆ ಸೇರಿದಂತೆ ಹಲವು ಕಾರ್ಯಕ್ಕೆ ಇದನ್ನು ಬಳಸಿಕೊಳ್ಳಲಾಗುತ್ತಿತ್ತು.

`ಘಟನೆಯಲ್ಲಿ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿಲ್ಲ. ತನಿಖೆಗೆ ಆದೇಶಿಸಲಾಗಿದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ದಾಳಿ
ಹೈದರಾಬಾದ್: ಆಂಧ್ರ ಪ್ರದೇಶದ ಬಜೆಟ್ ಮಂಡನೆಗೆ ಕೇವಲ ಒಂದು ದಿನ ಬಾಕಿ ಇರುವಾಗ ದುಷ್ಕರ್ಮಿಗಳು ಸರ್ಕಾರದ 21 ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಿ ಹಾಳುಗೆಡವಿರುವ ಘಟನೆ ನಡೆದಿದೆ.

ಈ ದಾಳಿಯು ಅಧಿಕಾರಿ ವಲಯದಲ್ಲಿ ಆತಂಕ ಮೂಡಿಸಿದೆ. ಆದರೆ, ಘಟನೆಯಿಂದ ಬಜೆಟ್‌ಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಎನ್‌ಆರ್‌ಎಚ್‌ಎಂ: ಮತ್ತೊಬ್ಬನ ನಿಗೂಢ ಸಾವು
ಲಖೀಮ್‌ಪುರ ಖೇರಿ (ನವದೆಹಲಿ) (ಪಿಟಿಐ): ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಹಗರಣಕ್ಕೆ (ಎನ್‌ಆರ್‌ಎಚ್‌ಎಂ) ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ನೌಕರರೊಬ್ಬರು ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಇದರಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಐವರು ವ್ಯಕ್ತಿಗಳು ಶಂಕಾಸ್ಪದವಾಗಿ ಸಾವಿಗೀಡಾದಂತಾಗಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆಯ ಲೆಕ್ಕಾಧಿಕಾರಿ ಮಹೇಂದ್ರ ಶರ್ಮ ಅವರ ಮೃತದೇಹ ಗಂಭೀರ ಗಾಯಗಳೊಂದಿಗೆ ಆರೋಗ್ಯ ಕೇಂದ್ರವೊಂದರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT