ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿಗಳು

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮದ್ ಮೊರ್ಸಿ ಅವರನ್ನು ಹಿಂಸಾಕೃತ್ಯ ನಡೆಸಿದ ಮತ್ತು ಹಿಂಸೆಗೆ ಪ್ರಚೋದಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ ವರದಿ ಮಾಡಿದೆ. 

ಜೈಲಿನಲ್ಲಿರುವವರ ಪಟ್ಟಿ ಹಸ್ತಾಂತರ
ಇಸ್ಲಾಮಾಬಾದ್ (ಇಎಎನ್‌ಎಸ್):  ಭಾರತದ ವಿವಿಧ ಜೈಲಿನಲ್ಲಿರುವ ಒಟ್ಟು 386 ಪಾಕಿಸ್ತಾನಿಯರ ಪಟ್ಟಿಯನ್ನು  ಭಾರತ ಪಾಕಿಸ್ತಾನಕ್ಕೆ ನೀಡಿದೆ. ಅಧಿಕೃತ ದಾಖಲೆಗಳ ಪ್ರಕಾರ, ಭಾರತದ ಜೈಲಿನಲ್ಲಿರುವ ಪಾಕಿಸ್ತಾನಿಯರ ಸಂಖ್ಯೆ 485 ಎನ್ನಲಾಗಿದೆ.

ಜೆಹಾದಿ ಪರ ಪಠ್ಯಕ್ಕೆ ಇಮ್ರಾನ್ ಪಟ್ಟು
ಇಸ್ಲಾಮಾಬಾದ್ (ಪಿಟಿಐ): ಭಯೋತ್ಪಾದಕರ ಹಾವಳಿ ಹೆಚ್ಚಿರುವ ಖೈಬರ್- ಪಖ್ತುನ್‌ಕ್ವಾ ಪ್ರಾಂತ್ಯದ ಶಾಲೆಗಳ ಪಠ್ಯಪುಸ್ತಕದಿಂದ ಜೆಹಾದಿ ಪರ ಪಠ್ಯಕ್ರಮವನ್ನು  ತೆಗೆದುಹಾಕಿರುವುದನ್ನು ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT