ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯಾಶಾಸ್ತ್ರಕ್ಕೆ ಕಟ್ಟುಬಿದ್ದ ನಿರ್ಮಾಪಕಿ ಏಕ್ತಾ ಕಪೂರ್

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಕಿರುತೆರೆ ಧಾರಾವಾಹಿಗಳ ಸ್ವರೂಪವನ್ನೇ ಬದಲಾಯಿಸಿದ ನಿರ್ಮಾಪಕಿ ಏಕ್ತಾ ಕಪೂರ್ ಮತ್ತೆ ಸಂಖ್ಯಾಶಾಸ್ತ್ರದ ಮೊರೆ ಹೋಗಿದ್ದಾರೆ. ತಮ್ಮ ಬಹು ನಿರೀಕ್ಷೆಯ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರ' ಚಿತ್ರದ ಹೆಸರನ್ನು ಮತ್ತೆ ಬದಲಿಸಿದ್ದಾರೆ. ಹಿಂದೆ ಇಟ್ಟಿದ್ದ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಅಗೈನ್'ಗೆ ಮತ್ತೆ ಗಂಟುಬಿದ್ದಿದ್ದಾರೆ.

ಇದರ ಜೊತೆಗೆ ಕೆಲವು ಅಕ್ಷರಗಳನ್ನು ಸೇರಿಸಿದ್ದಾರೆ. `ಎ' ಮುಂದೆ `ವೈ' ಸೇರಿಸಿದ್ದಾರೆ. `ಮುಂಬೈ'ಗೆ ಒಂದು `ಎ' ಹೆಚ್ಚಿಗೆ ಸೇರಿಸಿದ್ದಾರೆ.
`ನಾನು ಸಂಖ್ಯಾಶಾಸ್ತ್ರ ಮತ್ತು ಭವಿಷ್ಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ಆದರೆ ಚಿತ್ರ ಬಿಡುಗಡೆಯಾದ ಮೇಲಷ್ಟೇ ಅದರ ಪರಿಣಾಮ ತಿಳಿಯಲಿದೆ' ಎಂದಿದ್ದಾರೆ.

ಯಶಸ್ವಿ ಚಿತ್ರ ನಿರ್ಮಾಪಕರು ಸಿನಿಮಾ ನಿರ್ಮಾಣವನ್ನು ಜೂಜಿಗೆ ಹೋಲಿಸುತ್ತಾರೆ. ನಿಜ, ಚಿತ್ರನಿರ್ಮಾಣ ಜೂಜಿನಂತೆ. ವಾರಾಂತ್ಯದಲ್ಲಿ ಹಣೆಬರಹ ನಿರ್ಧಾರವಾಗಿಬಿಡುತ್ತದೆ. ಆದರೆ ಕಿರುತೆರೆಯಲ್ಲಿ ನಾವು ಟ್ರಾಕನ್ನೇ ಬದಲಾಯಿಸಬಹುದು. ಕೆಲ ಪಾತ್ರಗಳನ್ನು ಕೊಲ್ಲಬಹುದು. ಕೆಲವನ್ನು ಸೃಷ್ಟಿ ಮಾಡಬಹುದು ಎಂದು ತಮ್ಮ ಕಿರುತೆರೆ ಪ್ರೀತಿಯನ್ನು ತೋರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT