ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿ, ಮಕ್ಕಳ ಆಸ್ತಿ ವಿವರವೂ ಕಡ್ಡಾಯ

Last Updated 13 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣಾ ಅಭ್ಯರ್ಥಿಗಳು ತಮ್ಮ ಸಂಗಾತಿ ಮತ್ತು ಅವಲಂಬಿತ ಮಕ್ಕಳ ಆಸ್ತಿ ಹಾಗೂ ಸಾಲದ ವಿವರ ಸಲ್ಲಿಸದಿದ್ದರೆ ಅಂಥವರ ಆಯ್ಕೆಯನ್ನು ಅನೂರ್ಜಿತ­ಗೊಳಿಸ­ಬಹುದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

ಸುರೀಂದರ್‌ ಸಿಂಗ್‌ ನಿಜ್ಜಾರ್‌ ಮತ್ತು ಎ.ಕೆ.ಸಿಕ್ರಿ ಅವರನ್ನು ಒಳಗೊಂಡ ನ್ಯಾಯ­ಪೀಠ ಹೀಗೆ ಹೇಳಿದೆ. ಚುನಾ­ವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ತನ್ನ ವಿರುದ್ಧ ಹಿಂದೆ ಇದ್ದ ಕ್ರಿಮಿನಲ್‌ ಪ್ರಕರಣ­ಗಳು, ಶೈಕ್ಷಣಿಕ ಅರ್ಹತೆ ಕುರಿತೂ ಮಾಹಿತಿ ನೀಡು­ವುದು ಕಡ್ಡಾಯ ಎಂದು ನ್ಯಾಯಪೀಠ ಉಚ್ಚರಿಸಿದೆ.

ಸಂವಿಧಾನದ 19 (1) (ಎ) ವಿಧಿಯನ್ವಯ ಅಭ್ಯರ್ಥಿ ಹಿನ್ನೆಲೆಯ ಬಗ್ಗೆ ತಿಳಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೀಗಾಗಿ ಈ ಮೇಲಿನ ಮಾಹಿತಿಗಳೆಲ್ಲವನ್ನೂ ಅಭ್ಯರ್ಥಿಯು ನೀಡಲೇಬೇಕು ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT