ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಪಿತಾಮಹ ಪುರಾಣ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸೆ. 27ರ `ಪ್ರಜಾವಾಣಿ~ಯಲ್ಲಿ ಪ್ರಕಟವಾದ ಡಾ. ಲಿಂಗದಹಳ್ಳಿ ಹಾಲಪ್ಪ ಅವರ `ಕನ್ನಡದ ಮಹಾತ್ಮರೂ ಹಂಡೆ ವಜೀರರೂ~ ಎಂಬ ಲೇಖನಕ್ಕೆ ವಸುಧೇಂದ್ರ ಅವರು ಹೀಗೆ ಉತ್ತರಿಸಿದ್ದಾರೆ: “ನನಗೆ ಶಾಸ್ತ್ರೀಯ ಸಂಗೀತದ ಪರಿಚಯವಿಲ್ಲ.

ಆದರೆ ದಕ್ಷಿಣ ಭಾರತದ ಸಂಗೀತ ಶಾಸ್ತ್ರಜ್ಞರೆಲ್ಲ ಪುರಂದರದಾಸ `ಕರ್ನಾಟಕ ಸಂಗೀತ ಪಿತಾಮಹ~ ಎಂದು ಹೆಮ್ಮೆಯಿಂದ ಕೊಂಡಾಡಿರುವುದರಿಂದ ನಾನು ಹಾಗೆ ಹೇಳಿದೆ”.ಆದರೆ ದಿವಂಗತ ಸಾ.ಕೃ. ರಾಮಚಂದ್ರರಾಯರು `ಕರ್ನಾಟಕ ಸಂಗೀತ ಶಾಸ್ತ್ರದಲ್ಲಿ ಪ್ರಸಿದ್ಧರಾದ ತ್ರಿಮೂರ್ತಿಗಳೆಂದರೆ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶಾಮಾಶಾಸ್ತ್ರಿಗಳು.

ತ್ಯಾಗರಾಜರು ಪುರಂದರ ದಾಸರನ್ನು ಉಲ್ಲೇಖಿಸಿರುವುದು ಸಂತರೆಂದು ಅಷ್ಟೆ. ಸಂಗೀತ ಶಾಸ್ತ್ರಕ್ಕೆ ಅವರ ಕೊಡುಗೆಯನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಉಳಿದಿಬ್ಬರು ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರಿಗಳು ಅವರನ್ನೆಲ್ಲಿಯೂ ಉಲ್ಲೇಖಿಸಿಲ್ಲ~ ಎಂದಿದ್ದಾರೆ.

ಕರ್ನಾಟಕ ಸಂಗೀತ ಪಿತಾಮಹ ಎಂಬ ಬಿರುದು ದಿಟವಾಗಿ ವ್ಯಾಸರಾಯ ಸ್ವಾಮಿಗಳಿಗೆ ಸಲ್ಲಬೇಕು, ಇವರನ್ನು ತಂಜಾವೂರಿನ ದೊರೆ ತುಳಜಾಜಿ (1728-1736) ತನ್ನ `ಸಂಗೀತ ಸಾರಾಮೃತ~ ಎಂಬ ಗ್ರಂಥದಲ್ಲಿ `ಸಂಗೀತ ವಿದ್ಯಾ ಸಂಪ್ರದಾಯ ಪ್ರವರ್ತಕ~ ಎಂದು ಕರೆದಿದ್ದಾನೆ. ಆದರೆ ಪುರಂದರದಾಸರನ್ನು ಹಾಗೆ ಕರೆದಿಲ್ಲ. (ಪುಟ 36, ಪ್ರಸ್ತಾವನೆ, ಪುರಂದರ ಸಾಹಿತ್ಯ ದರ್ಶನ ಸಂ. 4.)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT