ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಕ್ಕೆ ಆಕಾಶವಾಣಿ ಕೊಡುಗೆ ಅಪಾರ

Last Updated 22 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ಧಾರವಾಡ: `ಧಾರವಾಡ ಅಕಾಶವಾಣಿಯು ಹಿಂದೂಸ್ತಾನಿ ಸಂಗೀತ ಮತ್ತು ಜಾನಪದ ಕಲೆಗಳ ಪ್ರಸಾರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅಲ್ಲದೇ ಕಲಾವಿದರಿಗೆ ಉತ್ತಮ ವೇದಿಕೆಯಾಗಿಯೂ ಕೆಲಸ ಮಾಡುತ್ತಿದೆ” ಎಂದು ಡಾ. ಚನ್ನವೀರ ಕಣವಿ ಹೇಳಿದರು.

ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಈಚೆಗೆ ಧಾರವಾಡ ಅಕಶವಾಣಿ ಕೆಂದ್ರವು ಅಕಾಶವಾಣಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸುಗಮ ಸಂಗೀತ, ಶಾಸ್ತ್ರೀಯ ಗಾಯನ, ವಾದ್ಯಗಳ ಮತ್ತು ವಾದ್ಯತ್ರಯಗಳ ಸಂಗೀತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಕಾಶವಾಣಿಯು ಜನರ ಅಗತ್ಯತೆಗಳಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಆದ್ದರಿಂದ ಇದನ್ನು ಬಾನುಲಿ ಜನತಾ ವಿಶ್ವವಿದ್ಯಾಲಯ ಅಥವಾ ಜನವಾಣಿ ಎಂದು ಕರೆಯಬಹುದು ಎಂದರು.

ಧಾರವಾಡ ಆಕಾಶವಾಣಿಯ ಕೇಂದ್ರ ಮುಖ್ಯಸ್ಥ ಡಾ. ಸಿ.ಯು.ಬೆಳ್ಳಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ನಕಾಶೆಯಲ್ಲಿ ಧಾರವಾಡ ಆಕಾಶವಾಣಿ ವಿಶಿಷ್ಟ ಸ್ಥಾನ ಪಡೆದಿದೆ. 62 ವರ್ಷಗಳಿಂದ ಉತ್ತರ ಕರ್ನಾಟಕದ ಮೂರು ಕೋಟಿ ಜನರನ್ನು ಪ್ರತಿನಿತ್ಯ ತಲುಪುತ್ತಿದೆ. ಇಲ್ಲಿಯವರೆಗೆ 45 ಬಾನುಲಿ ಸರಣಿಗಳನ್ನು ಮಾಡಿದ್ದು, ರಾಷ್ಟ್ರಮಟ್ಟದಲ್ಲಿ 16 ಪ್ರಶಸ್ತಿಗಳನ್ನು ಪಡೆಯುವ ಮೂಲಕ ತನ್ನನ್ನು ಗುರುತಿಸಿಕೊಂಡಿದೆ ಎಂದು ಹೇಳಿದರು.
ಧಾರವಾಡ ಆಕಾಶವಾಣಿಯ ಚಿತ್ರಭಂಡಾರದಿಂದ ಆಯ್ದ ಭಾವಚಿತ್ರಗಳ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಇದಕ್ಕೂ ಮುಂಚೆ ಎ.ಆರ್.ಅಚ್ಯುತರಾವ್ ನಿರ್ದೇಶನದಲ್ಲಿ ಬಾನುಲಿ ಸುಗಮ ಸಂಗೀತ ಜರುಗಿತು. ವಸಂತ ಕನಕಾಪುರ ಸಂಗೀತ ನಿರ್ದೇಶನ ಮಾಡಿದರು. ಜಗದೀಶ ಮಾಳಗಿ ನಿರ್ದೇಶನದಲ್ಲಿ ದೇಶಭಕ್ತಿ ಗೀತೆ, ಶ್ರೀಪಾದ ಹೆಗಡೆ, ಮಥುರಾ ದೀಕ್ಷಿತ, ವಸಂತ ಕನಕಾಪುರ ನಿರ್ದೇಶನದಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.ಮಯಾ ರಾಮನ್ ನಿರೂಪಿಸಿದರು. ಗಿರೀಶ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT