ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಯ ಸಮೂಹಗಾನ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಗೀತಗಾರರಿಗೊಂದು ಅಧಿಕೃತವಾದ ಸಂಘ ಅನ್ನುವುದೇ ಇರಲಿಲ್ಲ. ಬಹುಶಃ ಚಿತ್ರರಂಗದ ಪ್ರತಿಯೊಂದು ವಿಭಾಗಕ್ಕೂ ಒಂದೊಂದು ಸಂಘ ಇದೆ, ಏನಾದರೂ ಅಹಿತಕಾರಿ ಘಟನೆಗಳು ನಡೆದರೆ ಕೇಳುವವರಿದ್ದಾರೆ.

ಮೊದಲಿನಿಂದಲೂ ಸಿನಿಮಾ ಸಂಗೀತಗಾರರು ಅಸಂಘಟಿತ ಉದ್ಯೋಗಿಗಳು. ದಿನಗೂಲಿಯವರಂತೆ ದುಡಿವ ಇವರು ಅಶಕ್ತರಾದರೆ  ಶೋಚನೀಯ ಸ್ಥಿತಿ. ಯಾರೂ ಕೇಳುವವರಿಲ್ಲ.
 
ಕನ್ನಡದ ಕೆಲವು ಖ್ಯಾತ ಸಂಗೀತಗಾರರೇ ತಮ್ಮ ಅಶಕ್ತ ದಿನಗಳಲ್ಲಿ ಅತ್ಯಂತ ದಾರುಣ ಸ್ಥಿತಿ ತಲುಪಿದ ಸಂಗತಿ ಎಲ್ಲರಿಗೂ ಗೊತ್ತಿದೆ. ವಾದ್ಯಗಾರರ ಕತೆಯಂತೂ ಕೇಳುವುದೇ ಬೇಡ. ಇದನ್ನೆಲ್ಲ ಮನಗಂಡ ದಿವಂಗತ ಶಂಕರ್‌ನಾಗ್ ಎಂಬತ್ತರ ದಶಕದಲ್ಲಿ ಕನ್ನಡದ ಎಲ್ಲ ತಂತ್ರಜ್ಞರನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು.
 
ಅದಾದ ನಂತರ 90ರ ದಶಕದಲ್ಲಿ ಹಂಸಲೇಖಾ  `ಸಂಸಂ~ ಸಂಸ್ಥೆ ಹುಟ್ಟುಹಾಕಿದರು. ಅದು ಒಳ್ಳೆಯ ಉದ್ದೇಶದ ಸಂಘವಾಗಿ ಹುಟ್ಟಿತೇ ವಿನಾ ಕಾನೂನುಬದ್ಧ ಸಂಘವಾಗಿ ಬೆಳೆಯಲಿಲ್ಲ. ಇದೀಗ ಅನುಭವೀ ಸಂಗೀತ ನಿರ್ದೇಶಕರಾದ ಮನೋರಂಜನ್ ಪ್ರಭಾಕರ್ ನೇತೃತ್ವದಲ್ಲಿ `ಕನ್ನಡ ಚಲನಚಿತ್ರ ಸಂಗೀತಗಾರರ ಸಂಘ~ ಭಾರತೀಯ ಟ್ರೇಡ್ ಯೂನಿಯನ್ ಮೂಲಕ ಅಧಿಕೃತ ಸಂಘವಾಗಿ ರೂಪುಗೊಂಡಿದೆ.

ಮನೋರಂಜನ್ ಜೊತೆಗೆ ಸಂಗೀತ ನಿರ್ದೇಶಕರಾದ ಸದ್ಗುಣಮೂರ್ತಿ, ಮೋಹನ್ ರಾಜ್, ಸುಮಾರಾಣಿ, ಪ್ರವೀಣ್ ಡಿ. ರಾವ್, ಮಧುಸೂಧನ್, ಸುಜಾತಾ, ಮುಂತಾದವರು ಕೈಗೂಡಿಸಿದ ಶ್ರಮದ ಫಲವೇ ಈ `ಕಚಸಂಸಂ~. ಈಗಿನ ಸಂಘದಲ್ಲಿ ಗೀತರಚನೆಕಾರರೂ ಸೇರ್ಪಡೆಯಾಗಿದ್ದಾರೆ.

ಮನೋರಂಜನ್ ಪ್ರಭಾಕರ್, ಮೋಹನ್ ರಾಜ್,ಸುಮಾರಾಣಿ, ಶಿವಸತ್ಯ, ಇಂದೂ ವಿಶ್ವನಾಥ್, ಪ್ರವೀಣ ಡಿ.ರಾವ್, ಮಧುಸೂದನ್, ಅಜಯ್ ವಾರಿಯರ್, ಸದ್ಗುಣಮೂರ್ತಿ, ಬಿ.ವಿ. ಶ್ರೀನಿವಾಸ್, ಗೋಪಿ ಮುಂತಾದವರು `ಕಚಸಂಸಂ~ ಪದಾಧಿಕಾರಿಗಳ ಪಟ್ಟಿಯಲ್ಲಿದ್ದಾರೆ. ಫೆ.18ರಂದು ಸಂಘದ ಮೊದಲ ಸರ್ವ ಸದಸ್ಯರ ಸಭೆ ಬೆಂಗಳೂರಿನ ಜೆ.ಪಿ.ನಗರದ ಶ್ರವಣ ಸ್ಟುಡಿಯೋ ಆವರಣದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT