ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಅವ್ಯವಸ್ಥೆ ಪರದಾಡಿದ ಜನ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಮಡಿಕೇರಿ: ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೂರದೂರದಿಂದ ವಾಹನಗಳಲ್ಲಿ ಬಂದಿದ್ದ ಸಾವಿರಾರು ಜನ ಕನ್ನಡಾಭಿ­ಮಾನಿಗಳು ಸಂಚಾರದ ಅವ್ಯವಸ್ಥೆ­ಯಿಂದ ಶಪಿಸುವಂತಾಯಿತು. ಸಮ್ಮೇಳ­ನದ ಮುಖ್ಯ ವೇದಿಕೆಯಿದ್ದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದವರೆಗೆ ಹೋಗಲು ಅವರು ಪರದಾಡುತ್ತಿದ್ದರು.

ಪ್ರತಿ ಚೌಕಿಗಳಲ್ಲಿ, ವೃತ್ತಗಳಲ್ಲಿ ಬ್ಯಾರಿಕೇಡ್‌ ಹಾಕಿಕೊಂಡು ನಿಂತಿದ್ದ ಸಂಚಾರಿ ಪೊಲೀಸರ ಜೊತೆ ಜಗಳವಾಡುತ್ತಿದ್ದ ದೃಶ್ಯ ಕಾಣುತ್ತಿತ್ತು. ಹಲವು ಕಡೆ ಪಾಸ್‌ಗಳಿದ್ದ ವಾಹನಗಳನ್ನು ಕೂಡ ತಡೆಹಿಡಿಯ­ಲಾಗಿತ್ತು.

ಮಾತಿಗೆ ಮಾತು ಜೋರಾದಾಗ, ‘ಎಸ್‌.ಪಿ ಅವರಿಂದ ಹೇಳಿಸಿ’ ಎನ್ನುವ ಉಡಾಫೆಯ ಉತ್ತರವನ್ನು ಸಂಚಾರಿ ಪೇದೆಗಳು ಕೊಡುತ್ತಿದ್ದರು.
ಅತಿ ಹೆಚ್ಚು ತೊಂದರೆಗೆ ಗುರಿಯಾದ­ವರೆಂದರೆ ಸ್ಥಳೀಯ ನಾಗರಿಕರು. ’ನಾಲ್ಕು ಅಡಿ ದೂರದಲ್ಲಿರುವ ಮನೆಗೆ ಸುತ್ತುಬಳಸಿ ಹೋಗಬೇಕಾಗಿದೆ.
ಏಕಮುಖ ಸಂಚಾರದಿಂದ ಪೆಟ್ರೋಲ್‌ಗೆ ಎಷ್ಟೂಂತ ಹಣ ಸುರಿಯೋದು? ನಮ್ಮ ಕಷ್ಟ ಯಾರಿಗೆ ಹೇಳಬೇಕು?’ ಎಂದು ಮಡಿಕೇರಿಯ ಗಣಪತಿ     ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT