ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ: ಆಮೆಗತಿಯ ಕಾಮಗಾರಿ

Last Updated 6 ಆಗಸ್ಟ್ 2012, 6:45 IST
ಅಕ್ಷರ ಗಾತ್ರ

ಬೀದರ್: ಇದು, ನಗರದ ನಡುವೆ ಇರುವ ಸಮಸ್ಯೆ. ಸುಮಾರು ಒಂದೂವರೆ ವರ್ಷದ ಹಿಂದೆ ಕಾಮಗಾರಿ ಆರಂಭವಾದ ರೇಲ್ವೆ ಕೆಳಸೇತುವೆಯ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಕಾರಣ, ನಿತ್ಯ ಅಸಂಖ್ಯ ವಾಹನ ಚಾಲಕರು ಸಮಸ್ಯೆ ಎದುರಿಸಬೇಕಾಗಿದೆ.

ನಗರದ ಹೃದಯ ಭಾಗದಲ್ಲಿ ಗುಂಪಾ ಕಡೆಯಿಂದ ಹೃದಯ ಭಾಗದ ಹೈದರಾಬಾದ್ ರಸ್ತೆಗೆ ಸಂಪರ್ಕ ಒದಗಿಸುವ ಪ್ರಮುಖ ರಸ್ತೆ ಇದಾಗಿದ್ದು, ರೈಲ್ವೆ ಸಂಚಾರದ ಸಂದರ್ಭದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕೆಳಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಾಮಗಾರಿ ಸಾಕಷ್ಟು ವಿಳಂಬ ಆಗಿರುವ ಕಾರಣ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಮಹಾವೀರ ವತ್ತದಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ತೆರಳುವ ಈ ರೈಲ್ವೆ ಕೆಳಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಸೂಚನೆಯಿಲ್ಲ. ಕೆಲ ದಿನಗಳ ಹಿಂದೆ ನಗರಕ್ಕೆ ಭೇಟಿ ನೀಡಿದ್ದ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೂ ಈ ಪ್ರಶ್ನೆ ಎದುರಾಗಿತ್ತು.

ಆಗ, ಅಧಿಕಾರಿಗಳು ಅಲ್ಲಿ ಕೆಲ ನಿವೇಶನ ಸ್ವಾದೀನ ಪ್ರಕ್ರಿಯೆ ಬಾಕಿ ಇರುವ ಕಾರಣ ವಿಳಂಬವಾಗಿದೆ ಎಂದು ಸಬೂಬು ಹೇಳಿದ್ದರು. ಈ ಇಲ್ಲಿ ನಿವೇಶನ ಸ್ವಾದೀನದ ಪ್ರಶ್ನೆ ಇಲ್ಲ.

ಈ ಮೊದಲೇ ರಸ್ತೆ ಇತ್ತು ಎಂಬುದು ವಾಸ್ತವ.ವರ್ಷದ ಹಿಂದೆಯೇ ಆರಂಭವಾಗಿರುವ ಈ ಕಾಮಗಾರಿ ಈ ವೇಳೆಗೆ ಕೊನೆಗೊಳ್ಳಬೇಕಿತ್ತು. ಸಂಚಾರ ದಟ್ಟಣೆ ತಪ್ಪಿಸಲು ಈ ಮಾರ್ಗದಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತುತ, ಈಗ ಕಾಮಗಾರಿಯಿಂದಲೇ ಬಸವೇಶ್ವರ ವೃತ್ತದಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದ್ದ ಈ ರಸ್ತೆಯಲ್ಲಿ  ಸಂಚಾರ ನಿಷೇಧಿಸಲಾಗಿದೆ. ಇದ ರಿಂದಾಗಿ ಮಹಾವೀರ ವತ್ತದಿಂದ ರೈಲ್ವೆ ಗೇಟ್ ದಾಟಿ, ಗಾಂಧಿಗಂಜ್, ಚಿದ್ರಿ ಕಡೆಗೆ ಹೋಗುವ ವಾಹನ ಸವಾರರು ಬಸವೇಶ್ವರ ವತ್ತದ ಮೂಲಕ ಈ ದಾರಿಯನ್ನು ತಲುಪಬೇಕಾಗಿದೆ.

ಈ ಮಾರ್ಗ ಬಂದ್ ಮಾಡಿದ ನಂತರ ಬಸವೇಶ್ವರ ವತ್ತದ ಮೂಲಕ ಗುಂಪಾ ಮತ್ತು ಚಿದ್ರಿ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಆಗಿದೆ. ದಟ್ಟಣೆಯಿಂದಾಗಿ ಆಗಾಗ್ಗೆ ಅಲ್ಲಿ ಅಪಘಾತವೂ ಸಂಭವಿಸುತ್ತಿದೆ.
ಸಮಸ್ಯೆ ಹೆಚ್ಚಿದ್ದರೂ ರೈಲ್ವೆ ಇಲಾಖೆ ಹಾಗೂ ಜಿಲ್ಲಾಡಳಿತ ತ್ವರಿತಗತಿಯಲ್ಲಿ ಕಾಮಗಾರಿ ಪೂರೈಸಲು ಒತ್ತು ನೀಡುತ್ತಿಲ್ಲ ಎಂಬ ಆಕ್ಷೇಪ ಸಾರ್ವತ್ರಿಕವಾಗಿದೆ. ಇನ್ನೊಂದೆಡೆ, ಕಾಮಗಾರಿ ವಿಳಂಬವು ಈ ಭಾಗದಲಿರುವ ವ್ಯಾಪಾರಿಗಲ ನಿತ್ಯದ ಚಟುವಟಿಕೆಯ ಮಏಲೂ ಪರಿಣಾಮ ಬೀರಿದೆ.

ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಿ ಕಾಮಗಾರಿ ತ್ವರಿತಗೊಳಿಸಲು ಒತ್ತುನೀಡಿದರೆ ವಾಹನ ಚಾಲಕರು,ಪಾದಚಾರಿಗಳಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಬಹುದು. ಸಂಚಾರದ ಒತ್ತಡ ಕುಗ್ಗುವ ಜೊತೆಗೆ, ಅಪಘಾತಗಳ ಸಾಧ್ಯತೆಗಳು ಕ್ಷೀಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT