ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ವೈಟ್‌ಫೀಲ್ಡ್‌ನಲ್ಲಿ 14ರಂದು ಮಿಡ್‌ನೈಟ್‌ ಮ್ಯಾರಥಾನ್‌
Last Updated 11 ಡಿಸೆಂಬರ್ 2013, 20:00 IST
ಅಕ್ಷರ ಗಾತ್ರ

ಬೆಂಗಳೂರು: ರೋಟರಿ ಐ.ಟಿ ಕಾರಿ­ಡಾರ್ ನಗರದ ವೈಟ್‌ಫೀಲ್ಡ್‌ನಲ್ಲಿ ಶನಿ­ವಾರ (ಡಿ.14) ರಾತ್ರಿ ಆಯೋ­ಜಿಸಿರುವ ‘ಮಿಡ್‌ನೈಟ್‌ ಮ್ಯಾರಥಾನ್‌’ ಅಂಗ­ವಾಗಿ ಸತ್ಯಸಾಯಿ ಆಸ್ಪತ್ರೆಯ ಸುತ್ತಮು­ತ್ತಲಿನ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ರಾತ್ರಿ 12ರಿಂದ ಬೆಳಗ್ಗೆ 6 ಗಂಟೆವರೆಗೆ ಬದಲಾವಣೆ ಮಾಡಲಾಗಿದೆ.

ವೈಟ್‌ಫೀಲ್ಡ್‌ನ ಕೆಪಿಟಿಒ ಸಮುದಾಯ ಭವನದ ಎದುರು ಆರಂಭವಾಗುವ ಮ್ಯಾರಥಾನ್‌ ಎಲ್‌ ಅಂಡ್‌ ಟಿ ಇನ್ಫೊಟೆಕ್‌ ಮುಂಭಾಗದ ರಸ್ತೆ, ಸತ್ಯಸಾಯಿ ಆಸ್ಪತ್ರೆ ರಸ್ತೆಯಲ್ಲಿ ಸಾಗಲಿದೆ. ಒರಾಕಲ್‌ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮತ್ತೆ ಸತ್ಯಸಾಯಿ ಆಸ್ಪತ್ರೆ ರಸ್ತೆಯಲ್ಲಿ ಮುಂದುವರಿದು ವೈದೇಹಿ ಜಂಕ್ಷನ್‌ನಲ್ಲಿ ಬಲಕ್ಕೆ ಸಾಗಿ ಕೆಪಿಟಿಒ ಸಮುದಾಯ ಭವನದ ಬಳಿ ಮ್ಯಾರಥಾನ್‌ ಮುಕ್ತಾಯವಾಗಲಿದೆ.

ಮ್ಯಾರಥಾನ್‌ ನಡೆಯುವ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಿಂದ ವೈದೇಹಿ ಆಸ್ಪತ್ರೆ ಕಡೆಗೆ ಹೋಗುವ ವಾಹನಗಳು ಜಿಂಜರ್ ಹೋಟೆಲ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಐ-ಗೇಟ್ ರಸ್ತೆ ಮೂಲಕ ಸಾಗಬೇಕು.

ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಿಂದ ಐಟಿಪಿಎಲ್‌ ಕಡೆಗೆ ಹೋಗುವ ವಾಹನಗಳು ಹೂಡಿ ಮುಖ್ಯರಸ್ತೆ ಅಥವಾ ಸೀತಾರಾಮಪಾಳ್ಯ ರಸ್ತೆ ಮೂಲಕ ಸಂಚರಿಸಬೇಕು.

ಐಟಿಪಿಎಲ್‌ ಕಡೆಯಿಂದ ವೈದೇಹಿ ಆಸ್ಪತ್ರೆ ಕಡೆಗೆ ಹೋಗುವ ವಾಹನಗಳು ಪಟ್ಟಂದೂರು ಅಗ್ರಹಾರ ರಸ್ತೆಯಲ್ಲಿ ನಲ್ಲೂರಹಳ್ಳಿ ಕೆರೆಯಿಂದ ಮುಂದೆ ಸಾಗಿ ಬೋರ್‌ವೆಲ್‌ ರಸ್ತೆಯಲ್ಲಿ ಬಲ ತಿರುವು ಪಡೆದು ಸಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT