ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಮುಂಬೈ ಸುರಕ್ಷಿತ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಾಹನ ಚಾಲನೆ ಮತ್ತು ವ್ಯವಸ್ಥಿತ ಸಂಚಾರಕ್ಕೆ ಮುಂಬೈ ದೇಶದಲ್ಲೇ ಸುರಕ್ಷಿತ ಮಹಾ­ನಗರ ಎಂದು ಖಾಸಗಿ ಕಂಪೆನಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

ಖಾಸಗಿ ವಿಮೆ ಕಂಪೆನಿ ಐಸಿಐಸಿಐ ಲೊಂಬಾರ್ಡ್‌, ದೇಶದ ಪ್ರಮುಖ ಮಹಾ­­ನಗರಗಳಾದ ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದ­ರಾ­­ಬಾದ್‌ ಮತ್ತು ಕೋಲ್ಕತ್ತದಲ್ಲಿ 987 ಮಾದರಿಗಳನ್ನು ಸಂಗ್ರಹಿಸಿ ಈ ಸಮೀಕ್ಷೆ ಕೈಗೊಂಡಿತ್ತು.‘ಸುರಕ್ಷಿತ ವಾಹನ ಚಾಲನೆ ಹಾಗೂ ಶಿಸ್ತು­ಬದ್ಧ ಸಂಚಾರಕ್ಕೆ ಮುಂಬೈ ಮಹಾ­ನಗರ ಸೂಕ್ತ ಎಂಬುದಾಗಿ ಹೆಚ್ಚಿನ ಜನ ಅಭಿಪ್ರಾ­ಯಪಟ್ಟಿದ್ದಾರೆ’ ಎಂದು  ಐಸಿಐಸಿಐ ಲೊಂಬಾರ್ಡ್‌ ಮುಖ್ಯಸ್ಥ ಸಂಜಯ್‌ ದತ್‌ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ದೆಹಲಿ ಅತ್ಯುತ್ತಮವಾದ ರಸ್ತೆಗ­ಳನ್ನು ಹೊಂದಿದ್ದರೆ, ಬೆಂಗಳೂರು ಅತ್ಯು­ತ್ತಮ ವಾಹನ ಚಾಲನೆ ಸೌಲಭ್ಯದ ಜೊತೆಗೆ ಪೂರಕವಾದ ಪಾದಚಾರಿ ಮಾರ್ಗ, ತುರ್ತು ಅಂಬುಲೆನ್ಸ್‌ ಸೇವೆ ಸೇರಿ­­­ದಂತೆ ಇನ್ನಿತರ ಸೇವೆಗಳನ್ನು  ಹೊಂದಿ­­ರುವುದಾಗಿ ಜನ ಅಭಿಪ್ರಾಯ ಪಟ್ಟಿದ್ದಾಗಿ ಹೇಳಿದ್ದಾರೆ. ದಂಡದ ಮೊತ್ತ­ದ ಹೆಚ್ಚಿಸುವ ಮೂಲಕ ಸಂಚಾರ ನಿಯ­ಮ ಉಲ್ಲಂಘ­ನೆ­­­ ನಿಯಂತ್ರಿಸ­ಬಹು­ದು ಎಂದು ಶೇ 19ರಷ್ಟು ಮಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT