ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ಆರೋಗ್ಯ ಘಟಕ ಸ್ಥಾಪನೆ ಗುರಿ: ತೇಜಸ್ವಿನಿ

Last Updated 6 ಏಪ್ರಿಲ್ 2013, 5:38 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಜನತೆಗೆ ಅನುಕೂಲವಾಗಬೇಕೆಂಬ ದೃಷ್ಟಿ ಯಿಂದ ಕೂಡಗಿ ಬಳಿ ನಿರ್ಮಾಣವಾಗುತ್ತಿರುವ ವಿದ್ಯುತ್ ಘಟಕದ ಬಳಿ ಬೆಂಗಳೂರಿನ ಶಂಕರ ಫೌಂಡೇಶನ್ ಚಿಕಿತ್ಸಾ ಘಟಕದಿಂದ ಸಂಚಾರಿ ಆರೋಗ್ಯ ಘಟಕ ಆರಂಭಿಸಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಹೇಳಿದರು.

ಪಟ್ಟಣದ ಅಕ್ಕನಾಗಮ್ಮ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬೆಂಗಳೂರಿನ ಶಂಕರ ಫೌಂಡೇಶನ್ ಚಿಕಿತ್ಸಾ ಘಟಕದಿಂದ ಈಗಾಗಲೇ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಈ ಭಾಗದ ಜನತೆಯ ಅನಕೂಲಕ್ಕಾಗಿ ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿ, ಪ್ರಥಮ ಹಂತವಾಗಿ 15 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ನಂತರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಚಾರ ಚಿಕಿತ್ಸಾ ಘಟಕ ತೆರಳಿ ಉಚಿತ ಸೇವೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು. ರೈತರಿಗೆ ವಿದ್ಯುತ್ ಬಳಕೆಯ ಅವಶ್ಯಕತೆ ಇರುವು ದರಿಂದ ಈ ಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಅವಶ್ಯವಾಗಿದೆ ಎಂದರು.

ಸುಮಾ ಕಲ್ಲೂರ, ಗಿರಿಜಾ ಪಾಟೀಲ, ಪಾರ್ವತಿ ಚೌಧರಿ, ಪ್ರತಿಭಾ ಮಸಬಿನಾಳ ಸೇರಿದಂತೆ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT