ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಗುಳಿ ಸೇತುವೆ ಶಿಥಿಲ

Last Updated 3 ಜೂನ್ 2013, 13:17 IST
ಅಕ್ಷರ ಗಾತ್ರ

ಕುಮಟಾ: ಕುಮಟಾ- ಸಿದ್ದಾಪುರ ರಸ್ತೆಯ ಸಂತೆಗುಳಿ ಸೇತುವೆ ಶಿಥಿಲಗೊಂಡಿದ್ದು, ಭಾರವಾದ ವಾಹನಗಳ ಓಡಾಟದಿಂದ ಭವಿಷ್ಯದಲ್ಲಿ ಅದು ಕುಸಿದು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಸೇತುವೆ ಕೆಳಗಿನಿಂದ ನೋಡಿದರೆ ಅದರ ಒಳಭಾಗದ ಆರ್‌ಸಿಸಿ ಕಿತ್ತು ಹೋಗಿ ಕಬ್ಬಿಣದ ಸಲಾಕೆಗಳೆಲ್ಲ ಹೊರಗೆ ಕಾಣುತ್ತಿವೆ. ಸೇತುವೆಯ ಒಂದು ಕಂಬ ಉದ್ದಕ್ಕೆ ಬಿರುಕು ಬಿಟ್ಟ ಕಾರಣ ಸೇತುವೆ ಮಧ್ಯ ಭಾಗದಲ್ಲಿ ಸುಮಾರು ಅರ್ಧ ಅಡಿಯಷ್ಟು ಕುಸಿದಿದೆ. ಸೇತುವೆ ಮಧ್ಯದ ತಗ್ಗಿನಲ್ಲಿ ನೀರು ನಿಲ್ಲುತ್ತಿರುವುದು ಇದಕ್ಕೆ ನಿದರ್ಶನ.

ಸೇತುವೆಯ ಕಂಬದ ಅಡಿಪಾಯದ ಬಳಿ ಆರ್‌ಸಿಸಿ ಕಿತ್ತು ಹೋಗಿ ಕಂಬ ನಿರ್ಮಾಣಕ್ಕೆ ಬಳಸಿದ  ಕಬ್ಬಿಣದ ಸಲಾಕೆಗಳು ಹೊರ ಬಂದಿವೆ. ವಾಹನಗಳು ಸೇತುವೆಯ ಮೇಲೆ ಅತಿ ವೇಗವಾಗಿ  ಸಾಗುವಾಗ ಉಂಟಾಗುವ ಕಂಪನದಿಂದ ಸೇತುವೆಗೆ ಇನ್ನಷ್ಟು ಧಕ್ಕೆ ಉಂಟಾಗುತ್ತಿದೆ. ಈ ಸೇತುವೆ ಕುಸಿದರೆ  ರಸ್ತೆಯ ಮೂಲಕ ಕುಮಟಾ,  ಸಂತೆಗುಳಿ ನಂತರ ಸಿದ್ದಾಪುರ ವರೆಗಿನ ಸಂಪರ್ಕಕ್ಕೆ ಪರ್ಯಾಯ ಮಾರ್ಗವೇ ಇಲ್ಲದಂತಾಗುತ್ತದೆ. ಈ ಸೇತುವೆ ಕುಸಿಯುವ ಮುನ್ನ ಹೊಸ ಸೇತುವೆ ಇಲ್ಲಿ ನಿರ್ಮಾಣವಾಗುವುದು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT