ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪ್, ಸರ್ದಾರ್‌ಗೆ ಹೆಚ್ಚಿನ `ಬೆಲೆ'

ಎಚ್‌ಐಎಲ್: ನಾಳೆ ಆಟಗಾರರ ಹರಾಜು
Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಹಾಗೂ ಡ್ರ್ಯಾಗ್‌ಫ್ಲಿಕ್ಕರ್ ಸಂದೀಪ್ ಸಿಂಗ್ ಅವರಿಗೆ ಭಾನುವಾರ ನಡೆಯುವ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಆಟಗಾರರ ಹರಾಜಿನಲ್ಲಿ ಅತ್ಯಧಿಕ `ಮೂಲ ಬೆಲೆ' ನಿಗದಿಪಡಿಸಲಾಗಿದೆ.

ಇವರಿಬ್ಬರೂ ರೂ. 15 ಲಕ್ಷ ಮೂಲ ಬೆಲೆ ಹೊಂದಿದ್ದಾರೆ. ಲೀಗ್‌ನಲ್ಲಿ ಪಾಲ್ಗೊಳ್ಳವ ವಿದೇಶದ ಪ್ರಮುಖ ಆಟಗಾರರೂ ಇಷ್ಟು ಬೆಲೆ ಪಡೆದಿಲ್ಲ. ಭಾನುವಾರ ನಡೆಯುವ ಹರಾಜಿನಲ್ಲಿ ಒಟ್ಟು 246 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಆಟಗಾರರನ್ನು ಮೂಲಬೆಲೆ ಆಧಾರದಲ್ಲಿ 13 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ದೆಹಲಿ (ವೇವ್ ಸಮೂಹ), ರಾಂಚಿ (ಪಟೇಲ್- ಯುನಿಎಕ್ಸಲ್ ಸಮೂಹ), ಪಂಜಾಬ್ (ಜೇಪಿ ಸಮೂಹ), ಲಖನೌ (ಸಹರಾ ಇಂಡಿಯಾ) ಮತ್ತು ಮುಂಬೈ (ಬರ್ಮನ್ ಕುಟುಂಬ) ಫ್ರಾಂಚೈಸ್‌ಗಳು ಹರಾಜಿನಲ್ಲಿ ಆಟಗಾರರನ್ನು ಕೊಂಡುಕೊಳ್ಳಲಿದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ನಾಯಕ ಜೇಮಿ ಡ್ವಾಯರ್, ಗ್ಲೆನ್ ಟರ್ನರ್, ಮಾರಿಟ್ಜ್ ಫ್ಯುರ್ಟ್ಸೆ, ಜರ್ಮನಿಯ ಅಲಿವರ್ ಕಾನ್, ಪಾಕಿಸ್ತಾನದ ಆಟಗಾರರಾದ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ರಾಶಿದ್, ಹಾಲೆಂಡ್‌ನ ಟಕೆ ಟಕಮಾ, ಟೆನ್ ಡಿ ನೂಜೆರ್ ಹಾಗೂ ಸ್ಪೇನ್‌ನ ಪಾಲ್ ಅಮಟ್ ಬಳಿಕದ (ಮೂಲಬೆಲೆ 13.5 ಲಕ್ಷ ರೂ.) ಹಂತದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಇತರ ಆಟಗಾರರಾದ ಗುರ್ಬಾಜ್ ಸಿಂಗ್ ಮತ್ತು ಶಿವೇಂದ್ರ ಸಿಂಗ್ ರೂ. 10 ಲಕ್ಷ ಹಾಗೂ ಇಗ್ನೇಸ್ ಟಿರ್ಕಿ, ವಿ. ರಘುನಾಥ್, ದಾನಿಷ್ ಮುಜ್ತಬಾ, ಗುರ್ವಿಂದರ್ ಸಿಂಗ್, ಎಸ್.ವಿ. ಸುನಿಲ್, ಸರ್ವಂಜಿಂತ್ ಸಿಂಗ್ ಮತ್ತು ತುಷಾರ್ ಖಾಂಡೇಕರ್ ಅವರು ರೂ. 7.5 ಲಕ್ಷ ಮೂಲ ಬೆಲೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT